Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಗುಟ್ಕಾ, ಮದ್ಯಕ್ಕಾಗಿ ಮತ್ತೊಮ್ಮೆ ಅರೆಬೆತ್ತಲಾಗಿ ಟವರ್ ಏರಿ ಕುಳಿತ ಯುವಕ

ವಿಜಯಪುರ: ಗುಟ್ಕಾ, ಮದ್ಯಕ್ಕಾಗಿ ಮತ್ತೊಮ್ಮೆ ಅರೆಬೆತ್ತಲಾಗಿ ಟವರ್ ಏರಿ ಕುಳಿತ ಯುವಕ

ಅಶೋಕ ಯಡಳ್ಳಿ, ವಿಜಯಪುರ
| Updated By: Rakesh Nayak Manchi

Updated on: Aug 17, 2023 | 7:52 PM

ಇತ್ತೀಚೆಗೆ, ಟವರ್​ಗಳನ್ನು ಏರಿ ಹಚ್ಚಾಟ ಮೆರೆದು ಜನರಲ್ಲಿ ಆತಂಕ ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿವೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಯುವಕನೊಬ್ಬ ಅರೆಬೆತ್ತಲಾಗಿ ಮೊಬೈಲ್ ಟವರ್ ಏರಿದ್ದಾನೆ. ಆದರೆ ಈತನ ಈ ಹುಚ್ಚಾಟ ಇದೇ ಮೊದಲಲ್ಲ. ಇದಕ್ಕೂ ಹಿಂದೆ ಈ ರೀತಿ ಟವರ್ ಏರಿದ್ದನು.

ವಿಜಯಪುರ, ಆಗಸ್ಟ್ 17: ಬೃಹತ್ ಮೊಬೈಲ್ ಟವರ್ ಮೇಲೇರಿದ ಅರೆಬೆತ್ತಲೆ ಯುವಕನೊಬ್ಬ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಜಿಲ್ಲೆಯ ಸಿಂದಗಿ (Sindagi Town) ಪಟ್ಟಣದಲ್ಲಿ ನಡೆದಿದೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಟವರ್ ಏರಿದ ಯುವಕನಾಗಿದ್ದಾನೆ. ಇತ್ತೀಚೆಗೆ ಸಿಂದಗಿ ತಾಲೂಕಿನ ಬಳಗಾನೂರ, ಚಾಂದಕವಟೆ ಗ್ರಾಮದಲ್ಲಿ ಟವರ್ ಮೇಲೇರಿ ಆತಂಕ ಸೃಷ್ಟಿಸಿದ್ದ ಯುವಕನೂ ಈತನೇ. ಅಂದು ಮತ್ತು ಇಂದು ಟವರ್ ಏರಿದ್ದು ಮಾತ್ರ ಗುಟ್ಕಾ ಹಾಗೂ ಮದ್ಯಕ್ಕಾಗಿ. ಸದ್ಯ ಜನರು ಗುಟ್ಕಾ, ಮದ್ಯ ನೀಡುವುದಾಗಿ ಹೇಳಿ ಯುವಕನನ್ನು ಕೆಳಗಿಳಿಸಿ ಆತನಿಗೆ ಬಟ್ಟೆ ತೊಡಿದ್ದಾರೆ. ಈತನ ಈ ದುಸ್ಸಾಹಕ್ಕೆ ಜನರು ಬೇಸತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ