ವರ್ಷ ಪೂರ್ತಿ ಮಹಿಳೆಯರ ರಕ್ಷಣೆ ಆಗಬೇಕು ಎಂದ ನಟಿ ಹರ್ಷಿಕಾ ಪೂಣಚ್ಚ
ಮಹಿಳೆ ಆಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ಮಾರ್ಚ್8ಕ್ಕೆ ಮಾತ್ರ ಇದನ್ನು ಸೆಲೆಬ್ರೇಟ್ ಮಾಡೋದಲ್ಲ. ವರ್ಷ ಪೂರ್ತಿ ಇದರ ಆಚರಣೆ ಆಗಬೇಕು. ಅವರಿಗೆ ಸಿಗುವ ಹಕ್ಕು ವರ್ಷ ಪೂರ್ತಿ ಸಿಕ್ಕರೆ ಉತ್ತಮ ಎಂದರು ಹರ್ಷಿಕಾ.
ಇಂದು (ಮಾರ್ಚ್ 8) ವಿಶ್ವಾದ್ಯಂತ ಮಹಿಳಾ ದಿನಾಚರಣೆಯನ್ನು (International Women’s Day ) ಆಚರಿಸಲಾಗುತ್ತಿದೆ. ಮಹಿಳೆಯರು ಹಾಗೂ ಪುರುಷರು ಸಮಾನರು ಎಂದು ಸಾರುವ ನಿಟ್ಟಿನಲ್ಲಿ ಈ ದಿನಾಚರಣೆ ಮಹತ್ವ ಪಡೆದುಕೊಂಡಿದೆ. ಈನಮ್ಮ ಸಮಾಜ ಮೊದಲಿನಂತೆ ಇಲ್ಲ. ಕಾಲ ಬದಲಾಗಿದೆ. ಲಿಂಗ ತಾರತಮ್ಯದ ಕಾನ್ಸೆಪ್ಟ್ ಹೋಗಿದೆ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸರಿಯಾಗಿ ನಿಲ್ಲುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರು ಈ ವಿಶೇಷ ದಿನದ ಬಗ್ಗೆ ಮಾತನಾಡಿದ್ದಾರೆ. ‘ಮಹಿಳೆ ಆಗಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ಮಾರ್ಚ್ 8ಕ್ಕೆ ಮಾತ್ರ ಇದನ್ನು ಸೆಲೆಬ್ರೇಟ್ ಮಾಡೋದಲ್ಲ. ವರ್ಷ ಪೂರ್ತಿ ಇದರ ಆಚರಣೆ ಆಗಬೇಕು. ಅವರಿಗೆ ಸಿಗುವ ಹಕ್ಕು ವರ್ಷ ಪೂರ್ತಿ ಸಿಕ್ಕರೆ ಉತ್ತಮ. ಎಲ್ಲಾ ಪುರುಷರಲ್ಲೂ ನಾನು ಇದನ್ನು ಕೋರುತ್ತಿದ್ದೇನೆ. ದೌರ್ಜನ್ಯ ನಡೆದಾಗ ಅದನ್ನು ಖಂಡಿಸಬೇಕು’ ಎಂದು ಕೋರಿದರು.
ಇದನ್ನೂ ಓದಿ: KGF Chapter 2: ಯಶ್ ನಟನೆಯ ‘ಕೆಜಿಎಫ್ 2’ ತಂಡದಿಂದ ಸರ್ಪ್ರೈಸ್; ಪವರ್ಫುಲ್ ಪೋಸ್ಟರ್ ರಿಲೀಸ್
ತಂದೆ-ಮಗಳ ಪಾತ್ರದಲ್ಲಿ ರಾಘಣ್ಣ-ಹರ್ಷಿಕಾ ಪೂಣಚ್ಚ; ಇಲ್ಲಿದೆ ‘ಸ್ತಬ್ಧ’ ಫೋಟೋ ಗ್ಯಾಲರಿ