Hasanamaba Temple: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಹಾಸನಾಂಬೆ ಸನ್ನಿಧಿ, ದೇವಿ ದರ್ಶನ ಪಡೆದ ಮುಸ್ಲಿಂ ಮಹಿಳೆ
ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಮುಸ್ಲಿಂ ಮಹಿಳೆ ಹಸೀನಾ ಲತೀಫ್ ತಮ್ಮ ಭಕ್ತಿಯ ಅನುಭವ ಹಂಚಿಕೊಂಡರು. ಧರ್ಮದ ಗಡಿ ಮೀರಿದ ನಂಬಿಕೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸಿದ ಅವರು, ಈ ಬಾರಿ ಉತ್ತಮ ವ್ಯವಸ್ಥೆಗಳಿಂದಾಗಿ ದರ್ಶನ ಸುಗಮವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು. ಅವರ ಗೆಳತಿ ದೀಪಾ ಮಂಜುಳಾ ಕೂಡ ಜಾತಿಗಿಂತ ಮಾನವೀಯ ಸಂಬಂಧ ಮುಖ್ಯ ಎಂದರು.
ಹಾಸನ, ಅಕ್ಟೋಬರ್ 11: ಹಾಸನಾಂಬೆ ದೇವಾಲಯದ ಬಾಗಿಲು ಪ್ರತಿ ವರ್ಷದಂತೆ ಗುರುವಾರ ತೆರೆಯಲ್ಪಟ್ಟಿದ್ದು, ಶುಕ್ರವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿ. ಹಾಸನಾಂಬ ದೇವಿ ದರ್ಶನ ಕೋಮು ಸೌಹಾರ್ದತೆಗೂ ಸಾಕ್ಷಿಯಾಗಿದೆ. ಸಕಲೇಶಪುರ ಉರುಡಿಯಿಂದ ಬಂದಿದ್ದ ಮುಸ್ಲಿಂ ಮಹಿಳೆ ಹಸೀನಾ ಲತೀಫ್, ತಮ್ಮ ಗೆಳತಿ ದೀಪಾ ಮಂಜುಳಾ ಅವರೊಂದಿಗೆ ಹಾಸನಾಂಬೆ ದರ್ಶನ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಾಸನಾಂಬೆ ದರ್ಶನಕ್ಕೆ ಬರುತ್ತಿರುವ ಹಸೀನಾ, ತಮಗೆ ಹಾಸನಾಂಬೆ ಅಂದರೆ ತುಂಬಾ ಇಷ್ಟ ಎಂದು ತಿಳಿಸಿದ್ದಾರೆ.
