ಅವಸರಕ್ಕೆ ಬೆಲೆ ತೆತ್ತ ಯಶಸ್ವಿ ಜೈಸ್ವಾಲ್
India vs West Indies, 2nd Test: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 102 ಓವರ್ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 379 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ದ್ವಿತೀಯ ದಿನದಾಟದ ಆರಂಭದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಅದು ಸಹ ರನೌಟ್ ಆಗುವ ಮೂಲಕ ಎಂಬುದೇ ಅಚ್ಚರಿ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮೊದಲ ದಿನದಾಟದಲ್ಲಿ 173 ರನ್ ಪೇರಿಸಿದ್ದರು. ಇದಾಗ್ಯೂ ವೆಸ್ಟ್ ಇಂಡೀಸ್ ಬೌಲರ್ಗಳಿಗೆ ಅವರ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.
ಅತ್ತ 173 ರನ್ಗಳೊಂದಿಗೆ ದ್ವಿತೀಯ ದಿನದಾಟವನ್ನು ಆರಂಭಿಸಿದ್ದ ಜೈಸ್ವಾಲ್ ಕಡೆಯಿಂದ ದ್ವಿಶತಕವನ್ನು ನಿರೀಕ್ಷಿಸಲಾಗಿತ್ತು. ಆದರೆ ದ್ವಿತೀಯ ದಿನದಾಟದ 2ನೇ ಓವರ್ನಲ್ಲೇ ಜೈಸ್ವಾಲ್ ತಮ್ಮ ವಿಕೆಟ್ ಕೈಚೆಲ್ಲಿದ್ದಾರೆ.
ಜೇಡನ್ ಸೀಲ್ಸ್ ಎಸೆದ ಈ ಓವರ್ನ 2ನೇ ಎಸೆತದಲ್ಲಿ ಜೈಸ್ವಾಲ್ ಮಿಡ್ ಆಫ್ನತ್ತ ಬಾರಿಸಿ ರನ್ ಕದಿಯಲು ಯತ್ನಿಸಿದ್ದರು. ಆದರೆ ನಾನ್ ಸ್ಟ್ರೈಕ್ನಿಂದ ಶುಭ್ಮನ್ ಗಿಲ್ ರನ್ ನಿರಾಕರಿಸಿದರೂ ಅದನ್ನು ಗಮನಿಸದೇ ಯಶಸ್ವಿ ಜೈಸ್ವಾಲ್ ಪಿಚ್ನ ಅರ್ಧಭಾಗವನ್ನು ದಾಟಿದ್ದರು.
ಆ ಬಳಿಕ ತಿರುಗಿ ಓಡಿದರೂ, ಅಷ್ಟರಲ್ಲಾಗಲೇ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ಪರಿಣಾಮ 175 ರನ್ಗಳಿಸಿ ಯಶಸ್ವಿ ಜೈಸ್ವಾಲ್ ರನೌಟ್ ಆಗಿ ಪೆವಿಲಿಯನ್ ಕಡೆ ಭಾರದ ಹೆಜ್ಜೆಯಾಗಿದರು. ಇದೀಗ ಅವಸರದಲ್ಲಿ ವಿಕೆಟ್ ಕೈ ಚೆಲ್ಲಿದ ಜೈಸ್ವಾಲ್ ಅವರ ರನೌಟ್ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ 102 ಓವರ್ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 379 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

