Loading video

ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ

|

Updated on: Apr 02, 2025 | 8:03 PM

ನನಗೆ ನ್ಯಾಯ ಬೇಕೆಂದು ಯುವಕನೋರ್ವ ವಿಧಾನಸೌಧ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಸಣ್ಣ ಕವರ್ ಒಂದರಲ್ಲಿ ಕೆಲ ಡಾಕ್ಯೂಮೆಂಟ್ಸ್ ಜೊತೆಗೆ ವಿಷದ ಬಾಟಲಿ ತಂದಿದ್ದು, ನನಗೆ ನ್ಯಾಯಬೇಕೆಂದು ವಿಷ ಕುಡಿಯಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಯುವಕನ್ನು ಆಸ್ಪತ್ರೆಗೆ ಎಳೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಇದೀಗ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು, (ಏಪ್ರಿಲ್ 02): ವಿಧಾನಸೌಧ ಮುಂದೆ ವಿಷ ಸೇವಿಸಲು ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಂಜಯ್ ಎನ್ನುವಾತ ನನಗೆ ನ್ಯಾಯಬೇಕೆಂದು ವಿಧಾನಸಸೌಧದ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ತಡೆದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಬಳಿಕ ಸಂಜಯ್​ನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚನ್ನರಾಯಪಟ್ಟಣ ಠಾಣೆ ಪೊಲೀಸರು ಹೊಡೆದಿದ್ದು, ಇದಕ್ಕೆ ನ್ಯಾಯಬೇಕೆಂದು ಸಂಜಯ್​ ಆತ್ಮಹತ್ಯಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.