ಸುಪ್ರೀಂ ಕೋರ್ಟ್ ಗಾರ್ಡನ್ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ್ದೇನು?
ಸುಪ್ರೀಂ ಕೋರ್ಟ್ ಗಾರ್ಡನ್ನಿಂದ ಗುಲಾಬಿ ಹೂವುಗಳನ್ನು ಕದ್ದ ಮಹಿಳೆಗೆ ಈ ಬಗ್ಗೆ ಪ್ರಶ್ನಿಸಿದಾಗ ಆಕೆ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾಳೆ. ಪ್ರಭಾಕರ್ ಕುಮಾರ್ ಮಿಶ್ರಾ ಎಂಬುವವರು ಎಕ್ಸ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಆ ಮಹಿಳೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. "ಸುಪ್ರೀಂ ಕೋರ್ಟ್‌ನಲ್ಲಿ ಹಲವು ಗಂಭೀರ ವಿಷಯಗಳು ಬಾಕಿ ಇವೆ. ಜನರು ಕೊಲೆ ಮಾಡುತ್ತಾರೆ, ದರೋಡೆ ಮಾಡುತ್ತಾರೆ, ಆದರೆ ಯಾರೂ ಮಾತನಾಡುವುದಿಲ್ಲ. ಈಗ ನಾನು ಕೆಲವು ಹೂವುಗಳನ್ನು ಕೊಯ್ದಿದ್ದಕ್ಕೆ ಎಲ್ಲರೂ ಗಲಾಟೆ ಮಾಡುತ್ತಾರೆ" ಎಂದು ಆಕೆ ಹೇಳಿದ್ದಾಳೆ.
ನವದೆಹಲಿ, ಏಪ್ರಿಲ್ 2: ಭಾರತದ ಸುಪ್ರೀಂ ಕೋರ್ಟ್ (Supreme Court) ಈ ಬಾರಿ ತನ್ನ ಪ್ರಕರಣಗಳು ಮತ್ತು ತೀರ್ಪುಗಳಿಗಾಗಿ ಜನರ ಗಮನ ಸೆಳೆಯುವ ಬದಲು ಒಂದು ವಿಚಿತ್ರ ಕಾರಣಕ್ಕಾಗಿ ಸುದ್ದಿ ಮಾಡಿದೆ. ಮಹಿಳೆಯೊಬ್ಬಳು ಸುಪ್ರೀಂ ಕೋರ್ಟ್ ಗಾರ್ಡನ್ನಿಂದ ಗುಲಾಬಿ ಹೂವುಗಳನ್ನು ಕೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಅವಳು ಪಶ್ಚಾತ್ತಾಪ ಪಡಲಿಲ್ಲ. ಕೋರ್ಟಿನಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂತಹ ಅದೆಷ್ಟೋ ಪ್ರಕರಣಗಳು ತೀರ್ಪು ಹೊರಬರದೆ ಬಾಕಿ ಉಳಿದಿದೆ. ಆ ಬಗ್ಗೆ ಯಾರೂ ಮಾತಾಡುವುದಿಲ್ಲ. ಆದರೆ, ನಾನು ಹೂವು ಕೊಯ್ದಿದ್ದನ್ನೇ ಅಪರಾಧವೆಂಬಂತೆ ನೋಡುತ್ತಿದ್ದೀರಿ ಎಂದು ಆಕೆ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

