ಬಹಳ ಅದ್ಭುತ ಮತ್ತು ಸೊಗಸಾಗಿ ನಿರ್ಮಿಸಲಾಗಿದೆ ದೆಹಲಿಯ ನೂತನ ಕಾವೇರಿ ಕರ್ನಾಟಕ ಭವನ
ಕರ್ನಾಟಕ ಭವನ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಅಥವಾ ಮೀಸಲಾದುದಲ್ಲ, ಇದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಅದನ್ನು ನಾವು ಕಟ್ಟಡದ ಒಳಗೆ ಪ್ರವೇಶಿಸಿದ ನಂತರ ನೋಡಬಹುದು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲ ಸಚಿವರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸಹ ಇವತ್ತು ಕರ್ನಾಟಕ ಭವನದಲ್ಲಿದ್ದರು.
ದೆಹಲಿ, ಏಪ್ರಿಲ್ 2: ಈಗಾಗಲೇ ವರದಿಯಾಗಿರುವಂತೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ತಯಾರಾಗಿದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇವತ್ತು ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು. ಹೊಸ ಕರ್ನಾಟಕ ಭವನ ಹೇಗಿದೆಯೆಂಬ ಸಹಜ ಕುತೂಹಲ ಕನ್ನಡಿಗರಲ್ಲಿದೆ. ಕಟ್ಟಡವನ್ನು ನಿಸ್ಸಂದೇಹವಾಗಿ ಭವ್ಯವಾಗಿ ನಿರ್ಮಿಸಲಾಗಿದೆ. ಹೊರಗಡೆ ಸುಂದರವಾದ ಪೋರ್ಟಿಕೋ, ಲಾನ್ ಮತ್ತು ಉದ್ಯಾನ ಗಮನ ಸೆಳೆಯುತ್ತವೆ. ಒಳಗಡಿಯಿಡುತ್ತಿದ್ದಂತೆಯೇ ಸಿರಿಗನ್ನಡಂ ಗೆಲ್ಗೆ, ಸಿರುಗನ್ನಡಂ ಬಾಳ್ಗೆ- ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಸಾಲುಗಳು ಜನರನ್ನು ಸ್ವಾಗತಿಸುತ್ತವೆ. ಒಳಗಡೆ ಎಲ್ಲವನ್ನು ಬಹಳ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ಮುಡಾ ಹಗರಣ: ಕೋರ್ಟ್ ಮೆಟ್ಟಿಲೇರಿದ ಇಡಿ, ಸಿದ್ದರಾಮಯ್ಯಗೆ ಢವ ಢವ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

