ಬಿಜೆಪಿ ಇಂದು ನಡೆಸಿದ ಹೋರಾಟದಲ್ಲಿ ಬಿಪಿ ಹರೀಶ್ ಭಾಗಿ; ಯತ್ನಾಳ್ರಿಂದ ವಿಮುಖರಾಗುತ್ತಿದ್ದಾರೆಯೇ ನಾಯಕರು?
ಅದು ಸರಿ ನಿಮ್ಮ ಮತ್ತು ಯತ್ನಾಳ್ ಜೊತೆಗಿದ್ದ ಜೊತೆ ಬೇರೆ ಬಿಜೆಪಿ ನಾಯಕರು ಇವತ್ತಿನ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ನಮ್ಮ ವರದಿಗಾರ ಕೇಳಿದರೆ, ಬಿಜೆಪಿ ರಾಜ್ಯಾಧ್ಯಕ್ಷರು ಕರೆ ನೀಡಿದ ಯಾವ ಹೋರಾಟದಲ್ಲೂ ಅವರು ಭಾಗಿಯಾಗಿಲ್ಲ, ತಾನಾದರೋ ಮುಡಾ ಪಾದಯಾತ್ರೆ, ವಾಲ್ಮೀಕಿ ಹಗರಣ ಮತ್ತು ಬಿಜೆಪಿ ನಡೆಸಿದ ಎಲ್ಲ ಹೋರಾಟಗಳಲ್ಲಿ ಭಾಗಿಯಾಗಿರುವುದಾಗಿ ಹರೀಶ್ ಹೇಳಿದರು.
ಬೆಂಗಳೂರು, ಏಪ್ರಿಲ್ 2: ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗಿದ್ದ ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ಅವರಿಂದ ದೂರವಾಗುತ್ತಿರುವ ಸನ್ನವೇಶ ಸೃಷ್ಟಿಯಾದಂತಿದೆ. ಅವರೊಂದಿಗೆ ಗುರುತಿಸಿಕೊಂಡಿದ್ದ ಶಾಸಕ ಬಿಪಿ ಹರೀಶ್ ಇವತ್ತು ಅರ್ ಅಶೋಕ ಮತ್ತು ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ತಮ್ಮದೇ ಆದ ಸಮರ್ಥನೆ ನೀಡಿದರು. ರಾಜ್ಯದ ಜನತೆ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ, ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಕಾಂಗ್ರೆಸ್ ಸರಕಾರ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದೆ, ವಿಷಯಾಧಾರಿತ ಹೋರಾಟಕ್ಕೆ ತಾನು ಯಾವತ್ತೂ ಬೆಂಬಲಿಸುತ್ತೇನೆ ಎಂದು ಹರೀಶ್ ಹೇಳಿದರು.
ಇದನ್ನೂ ಓದಿ: ಯತ್ನಾಳ್ಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಲಿ: ರೇಣುಕಾಚಾರ್ಯ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!

ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ

ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್ಕೆ ಪಾಟೀಲ್
