Loading video

ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಸ್ಫೋಟಕ ಕಾರಣ ಬಿಚ್ಚಿಟ್ಟ ಡಿಹೆಚ್​ಓ

Updated By: ರಮೇಶ್ ಬಿ. ಜವಳಗೇರಾ

Updated on: Jun 23, 2025 | 5:53 PM

ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವರ್ಷಗಳಲ್ಲಿ ಬರೋಬ್ಬರಿ 507 ಜನರಿಗೆ ಹೃದಯಾಘಾತವಾಗಿದೆ. 20 ರಿಂದ 30 ವಯಸ್ಸಿನ 14 ಜನರು, 30 ರಿಂದ 40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರಿಗೆ ಹೃದಯಾಘಾತವಾಗಿದ್ದು, ಈ ಪೈಕಿ ಎರಡು ವರ್ಷಗಳಲ್ಲಿ ಒಟ್ಟು 140 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಅಂಶ ತಿಳಿದುಬಂದಿದೆ. ದುಶ್ಚಟ, ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹೃದಯಘಾತ ಸಂಭವಿಸುತ್ತಿವೆ ಎಂದು ಹಾಸನ ಡಿಹೆಚ್​ ಓ ಕಾರಣ ತಿಳಿಸಿದ್ದಾರೆ.

ಹಾಸನ, (ಜೂನ್ 23): ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವರ್ಷಗಳಲ್ಲಿ ಬರೋಬ್ಬರಿ 507 ಜನರಿಗೆ ಹೃದಯಾಘಾತವಾಗಿದೆ. 20 ರಿಂದ 30 ವಯಸ್ಸಿನ 14 ಜನರು, 30 ರಿಂದ 40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರಿಗೆ ಹೃದಯಾಘಾತವಾಗಿದ್ದು, ಈ ಪೈಕಿ ಎರಡು ವರ್ಷಗಳಲ್ಲಿ ಒಟ್ಟು 140 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಅಂಶ ತಿಳಿದುಬಂದಿದೆ. ದುಶ್ಚಟ, ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹೃದಯಘಾತ ಸಂಭವಿಸುತ್ತಿವೆ ಎಂದು ಹಾಸನ ಡಿಹೆಚ್​ ಓ  ಮಾಹಿತಿ ನೀಡಿದ್ದಾರೆ.

ಇನ್ನು ಈ ಸರಣಿ ಹೃದಯಾಘಾತ ಪ್ರಕರಣಗಳ ಬಗ್ಗೆ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಅನಿಲ್ ಪ್ರತಿಕ್ರಿಯಿಸಿದ್ದು, ಯುವ ಜನರಲ್ಲಿ ಹೆಚ್ಚುತ್ತಿರುವ ದುಶ್ಚಟ, ಅಸಮತೊಲನದ ಅಹಾರ ಸೇವನೆ, ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹೃದಯಾಘಾತ ತಡೆಗೆ ಸಂಸದರ ನೇತೃತ್ವದಲ್ಲಿ ಎಲ್ಲಾ ಅರೋಗ್ಯ ಅದಿಕಾರಿಗಳ ಸಭೆ ನಡೆಸಲಾಗಿದ್ದು, ಹೃದಯಾಘಾತ ತಡೆಗೆ ಅರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಮಾಡಲು ಸಿದ್ದತೆ ನಡೆಸಲಾಗಿದೆ. ಅರೋಗ್ಯ ಕಾರ್ಯಕರ್ತೆ ಯರು ಮೂಲಕ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಾಗೃತಿ ಮಾಡಲಾಗುತ್ತೆ. ಶಾಲೆ ಕಾಲೇಜುಗಳಲ್ಲಿ ಕೂಡ ಹೃದಯ ಅರೋಗ್ಯ ದ ತಪಾಸಣೆ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನ ಮಾಡಲಾಗಿದೆ. ಹೃದಯಾಘಾತಗಳ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಬದಲಾಗಿ ನಿಯಮಿತವಾಗಿ ಅರೋಗ್ಯ ತಪಾಸಣೆ, ಉತ್ತಮ ಅರೋಗ್ಯ ಶೈಲಿ ರೂಪಿಸಿಕೊಂಡು ಅರೋಗ್ಯವಾಗಿರಲು ಮನವಿ ಮಾಡಿದ್ದಾರೆ.

Published on: Jun 23, 2025 04:26 PM