ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಪ್ರತಿಭಟನೆ; ಸಿಎಂ ಮನವಿಗೂ ಒಪ್ಪದ ಚೌಡಹಳ್ಳಿ ಗ್ರಾಮಸ್ಥರು
ಹಾಸನದ ಚೌಡಹಳ್ಳಿಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಪ್ರಕರಣ ಸಂಬಂಧ ಗ್ರಾಮಸ್ಥರ ಪ್ರತಿಭಟನೆ ತೀವ್ರಗೊಂಡಿದೆ. ದೂರವಾಣಿ ಮೂಲಕ ಶಾಶ್ವತ ಪರಿಹಾರದ ಭರವಸೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಮನವಿಗೂ ಗ್ರಾಮಸ್ಥರು ಪಟ್ಟು ಸಡಿಲಿಸದೆ ಧರಣಿ ಮುಂದುವರಿಸಿದ್ದಾರೆ. ಸಮಸ್ಯೆ ಬಗ್ಗೆ ಶಾಸಕ ಎಚ್.ಕೆ.ಸುರೇಶ್ ಕೂಡ ಸಿಎಂಗೆ ದೂರವಾಣಿ ಕರೆ ಮೂಲಕ ಮನವರಿಕೆ ಮಾಡಿದ್ದಾರೆ.
ಹಾಸನ, ನವೆಂಬರ್ 15: ಕಾಡಾನೆ ದಾಳಿಯಿಂದ 48 ವರ್ಷದ ಜಯಮ್ಮ ಬಲಿ ಪ್ರಕರಣ ಸಂಬಂಧ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಹಿಳೆಯ ಶವ ಇಟ್ಟುಕೊಂಡು ಧರಣಿ ನಡೆಸಲಾಗುತ್ತಿದ್ದು, ಧರಣಿ ಕೈಬಿಡುವಂತೆ ಶಾಸಕ H.K.ಸುರೇಶ್ ಮತ್ತು ಸಂಸದ ಶ್ರೇಯಸ್ ಪಟೇಲ್ ಮನವಿಗೂ ಪ್ರತಿಭಟನಾಕಾರರು ಒಪ್ಪಿಲ್ಲ. ಕಾಡಾನೆಹಾವಳಿ ತಡೆಗೆ ಶಾಶ್ವತಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿರುವ ಕಾರಣ ಧರಣಿ ಸ್ಥಳದಿಂದಲೇ ಸಿಎಂ ಡಿಕೆಶಿಗೆ ಸಂಸದ ಶ್ರೇಯಸ್ ಫೋನ್ ಮಾಡಿದ್ದಾರೆ. ಈ ವೇಳೆ ಬ್ಯಾರಿಕೇಡ್ ಹಾಕಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸುವೆ ಎಂದ ಸಿಎಂ, ಒಂದು ನಿಯೋಗ ಮಾಡಿಕೊಂಡು ಬೆಂಗಳೂರಿಗೆ ಬರಲು ಸೂಚನೆ ನೀಡಿದ್ದಾರೆ. ಅಲ್ಲದೆ ನಿಮ್ಮ ಬಳಿಗೆ ಅಧಿಕಾರಿಗಳನ್ನು ಕಲಿಸುತ್ತೇನೆ. ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಲ್ಲದೆ, ತನಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಸಚಿವರ ಜೊತೆ ಸಭೆ ಮಾಡುತ್ತೇವೆ. ನೀವು ಯಾವುತ್ತು ದಿನಾಂಕ ನಿಗದಿ ಮಾಡಿದರೆ ಅಂದು ಎಲ್ಲಾ ಅಧಿಕಾರಿಗಳ ಜೊತೆ ಬರುತ್ತೇನೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದಿದ್ದಾರೆ. ಆದರೆ ಸಿಎಂ ಡಿಕೆಶಿ ಮನವಿಗೂ ಚೌಡಹಳ್ಳಿ ಗ್ರಾಮಸ್ಥರು ಪಟ್ಟು ಸಡಿಲಿಸಿಲ್ಲ. ಸಮಸ್ಯೆ ಬಗ್ಗೆ ಶಾಸಕ ಎಚ್.ಕೆ.ಸುರೇಶ್ ಕೂಡ ಸಿಎಂಗೆ ದೂರವಾಣಿ ಕರೆ ಮೂಲಕ ಮನವರಿಕೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

