ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ

Edited By:

Updated on: Jan 30, 2026 | 2:55 PM

ಹಾಸನದಲ್ಲಿ ಕಸ ಎಲ್ಲೆಂದರಲ್ಲಿ ಬಿಸಾಡುತ್ತಿದ್ದವರಿಗೆ ಮಹಾನಗರಪಾಲಿಕೆ ಸಿಬ್ಬಂದಿ ಪಾಠ ಕಲಿಸಿದೆ. ಉದಯಗಿರಿ ಬಡಾವಣೆಯಲ್ಲಿ ಕಸ ರಸ್ತೆ ಬದಿಗೆ ಎಸೆಯುತ್ತಿದ್ದ ಮನೆಯ ಕಾಂಪೌಂಡ್‌ ಒಳಗೆ ಒಂದು ಲೋಡ್ ಕಸವನ್ನು ಸುರಿಯಲಾಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕ್ಯಾರೆ ಎನ್ನದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಹಾಸನ, ಜನವರಿ 30: ಮಹಾನಗರ ಪಾಲಿಕೆಯ ಸಿಬ್ಬಂದಿ ಒಂದು ಲೋಡ್ ಕಸವನ್ನು ಮನೆಯ ಕಾಂಪೌಂಡ್‌ ಒಳಗೆ ಸುರಿಯುವ ಮೂಲಕ ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಾಸನ ನಗರದ ಉದಯಗಿರಿ ಬಡಾವಣೆ ರಸ್ತೆಯಲ್ಲಿ ಘಟನೆ ನಡೆದಿದೆ. ಕರಿಯಪ್ಪ ಮತ್ತು ದ್ಯಾವಮ್ಮ ಎಂಬುವವರ ಮನೆ ಮುಂದೆ ಕಸ ಸುರಿಯಲಾಗಿದೆ. ರಸ್ತೆ ಬದಿ ಕಸ ಸುರಿಯುತ್ತಿದ್ದ ಬಗ್ಗೆ ಮನೆ ಮಾಲೀಕರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆ ಪಾಲಿಕೆ ಹಲವು ಬಾರಿ ಎಚ್ಚರಿಕೆ ನೀಡಿದೆ. ಇದಕ್ಕೆ ಕ್ಯಾರೆ ಎನ್ನದೆ ರಸ್ತೆ ಬದಿ ಕಸ ಎಸೆಯುತ್ತಿದ್ದರು. ಅವರಿಗೆ ಪಾಠ ಕಲಿಸಲೆಂದೇ ಇಂದು ಬೆಳಿಗ್ಗೆ ಒಂದು ಲೋಡ್ ಕಸವನ್ನು ಅವರ ಮನೆಯ ಆವರಣದಲ್ಲಿ ಸುರಿಯಲಾಗಿದೆ. ಹೀಗಾಗಿ ಪಾಲಿಕೆ ಸಿಬ್ಬಂದಿ ಹಾಗೂ ಮಹಿಳೆ‌ ನಡುವೆ ವಾಗ್ವಾದ ಉಂಟಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jan 30, 2026 02:51 PM