Hasanambe Temple Live: ಇಂದು ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್​; ಲೈವ್​ ನೋಡಿ​

Updated on: Oct 23, 2025 | 11:15 AM

ವರ್ಷಕ್ಕೊಮ್ಮೆ ತೆರೆದಿದ್ದ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಮುಚ್ಚಲಿದೆ. ಅಕ್ಟೋಬರ್ 9ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ 26 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, 22 ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹವಾಗಿದೆ. ವಿಶ್ವರೂಪ ದರ್ಶನದ ನಂತರ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಲಾಗುವುದು.

ಹಾಸನ, ಅಕ್ಟೋಬರ್​ 23: ಸದ್ಯ ಹಾಸನಾಂಬೆಯ (Hasanamba Temple) ಸಾರ್ವಜನಿಕ ದರ್ಶನ ನಿನ್ನೆ ಸಂಜೆ 7ಕ್ಕೆ ಸ್ಥಗಿತಗೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಅ.9ರಂದು ತೆರೆದಿದ್ದ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು, ಈವರೆಗೆ 26 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಪಡೆದುಕೊಂಡಿದ್ದು, ಲಾಡು ಪ್ರಸಾದ, ಟಿಕೆಟ್ ಮಾರಾಟದಿಂದ 22 ಕೋಟಿಗೂ ಹೆಚ್ಚು ಆದಾಯ ಹರಿಬಂದಿದೆ. ಆ ಮೂಲಕ ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ಇತಿಹಾಸ ಬರೆದಿದೆ. ನೇರಪ್ರಸಾರ ವೀಕ್ಷಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.