Loading video

Video: ನಿಯಂತ್ರಣಕ್ಕೆ ಹಾಕಿದ್ದ ಸೋಲಾರ್ ಬೇಲಿಯನ್ನು ಮುರಿದು ಹಾಕಿದ ಚಾಣಾಕ್ಷ ಕಾಡಾನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2023 | 7:43 PM

ಪ್ರಾಣಿಗಳು ಕೂಡ ಮನುಷ್ಯರಷ್ಟೇ ಬುದ್ಧಿವಂತವಾಗಿರುತ್ತವೆ. ಅದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಸೋಲಾರ್ ಬೇಲಿಯನ್ನು ಕಾಡಾನೆ ಒಂದು ಚಾಣಾಕ್ಷತೆಯಿಂದ ದಾಟಿದೆ. ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಳೇಬಾಗೆ ಗ್ರಾಮದ ಸಮೀಪ‌‌ ಘಟನೆ ನಡೆದಿದ್ದು, ಸದ್ಯ ಬೇಲಿಯನ್ನು ದಾಟಿಹೋದ ಒಂಟಿ ಸಲಗದ ವಿಡಿಯೋ ವೈರಲ್​ ಆಗಿದೆ.

ಹಾಸನ, ಸೆಪ್ಟೆಂಬರ್​ 15: ಪ್ರಾಣಿಗಳು ಕೂಡ ಮನುಷ್ಯರಷ್ಟೇ ಬುದ್ಧಿವಂತವಾಗಿರುತ್ತವೆ. ಅದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಸೋಲಾರ್ ಬೇಲಿಯನ್ನು ಕಾಡಾನೆ (wild elephant) ಒಂದು ಚಾಣಾಕ್ಷತೆಯಿಂದ ದಾಟಿದೆ. ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಳೇಬಾಗೆ ಗ್ರಾಮದ ಸಮೀಪ‌‌ ಘಟನೆ ನಡೆದಿದ್ದು, ಸದ್ಯ ಬೇಲಿಯನ್ನು ದಾಟಿಹೋದ ಒಂಟಿ ಸಲಗದ ವಿಡಿಯೋ ವೈರಲ್​ ಆಗಿದೆ. ದಿವಾನ್ ಎಸ್ಟೇಟ್‌ಗೆ ಹಾಕಿದ್ದ ಸೋಲಾರ್ ತಂತಿ ಬೇಲಿಯನ್ನು ಕಾಡಾನೆ ಕಾಲಿನಿಂದ ಮುರಿದಿದೆ. ಸೋಲರ್ ಬೇಲಿಯಲ್ಲಿ ವಿದ್ಯುತ್ ಇರುವುದು ಖಚಿತ ಮಾಡಿಕೊಂಡು ಅದನ್ನು ಜಾಣ್ಮೆಯಿಂದ ಮುರಿದಿದೆ. ಬಳಿಕ ವಿದ್ಯುತ್ ತಂತಿ ತನಗೆ ತಾಗದಂತೆ ಜಾಗರೂಕತೆಯಿಂದ ಹೊರ ಬಂದಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.