ಪ್ರಶಾಂತ್ ಪೋಸ್ಟ್ ಮಾರ್ಟಮ್: ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಒಂದಿಷ್ಟೂ ತಾಳ್ಮೆ ಕಳೆದುಕೊಳ್ಳದೆ ರೇವಣ್ಣ ಮನವೊಲಿಸಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2022 | 10:04 PM

ಅಮೇಲೆ ರೇವಣ್ಣ ಯಾವುದೋ ಒಂದು ಕಾಗದದ ಮೇಲೆ ಸಹಿ ಹಾಕಿ ಕೊಡಿ ಅನ್ನುತ್ತಾರೆ. ಎಸ್ ಪಿ ಅದನ್ನೂ ಮಾಡುತ್ತಾರೆ. ಮತ್ಯಾವುದೋ ವಿಷಯಕ್ಕೆ ಅವರು ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ಉಲ್ಲೇಖಿಸುತ್ತಾರೆ. ಎಸ್ ಪಿ ಅವರಿಗೆ ನಿಮ್ಮ ಬಗ್ಗೆ ತುಂಬಾ ಗೌರವ ಇದೆ ಅಂತಲೂ ರೇವಣ್ಣ ಹೇಳುತ್ತಾರೆ.

Hassan: ಬುಧವಾರ ಕೊಲೆಯಾದ ಹಾಸನ ನಗರ ಸಭಾ ಸದಸ್ಯ ಪ್ರಶಾಂತ ನಾಗರಾಜ (Prashanth Nagaraj) ದೇಹದ ಮರಣೋತ್ತರ ಪರೀಕ್ಷೆ (postmortem) ನಡೆಸಲು ಮಾಜಿ ಸಚಿವ ಮತ್ತು ಜೆಡಿ(ಎಸ್) ಶಾಸಕ ಹೆಚ್ ಡಿ ರೇವಣ್ಣ (HD Revanna) ಅಡ್ಡಿಪಡಿಸಿದರು ಅನ್ನೋದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಶಾಸಕರ ಹಟವೇನಾಗಿತ್ತೆಂದರೆ ಸದರಿ ಪ್ರಕರಣದಲ್ಲಿ ನಿಷ್ಕಾಳಜಿ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಸಿಪಿಐ ರೇಣುಕಾಪ್ರಸಾದರನ್ನು ಕೂಡಲೇ ವಜಾ ಮಾಡಬೇಕೆನ್ನುವುದು. ಈ ವಿಡಿಯೋನಲ್ಲಿ ಅವರು ತಮ್ಮ ಹಟ ಮುಂದುವರಿಸಿದ್ದಾರೆ ಮತ್ತು ಪೊಲೀಸರ ಮನವಿಗೆ ಕ್ಯಾರೇ ಅನ್ನುತ್ತಿಲ್ಲ. ಹಿಂದಿನ ವಿಡಿಯೋನಲ್ಲಿ ಅವರು ಸಿಪಿಐರನ್ನು ವಜಾ ಮಾಡಬೇಕು ಅನ್ನುತ್ತಿದ್ದರೆ ಇಲ್ಲಿ ಬೇರೆ ವರಾತ ತೆಗೆದಿದ್ದಾರೆ.

ಈ ವಿಡಿಯೋನಲ್ಲಿ ಅವರು ಐಜಿಯನ್ನು ಸ್ಥಳಕ್ಕೆ ಕರೆಸಿ ಅಂತ ಹಾಸನದ ಎಸ್ ಪಿ ಅವರಿಗೆ ಹೇಳುತ್ತಿದ್ದಾರೆ. ಎಸ್ ಪಿ ಶಾಸಕರನ್ನು ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಿರುವುದನ್ನು ನೀವು ನೋಡಬಹುದು. ಆದರೆ ರೇವಣ್ಣ ಮಾತ್ರ ಕಮಕ್ಕೆನ್ನುತ್ತಿಲ್ಲ. ನೀವು ಹೇಳೋದನ್ನೆಲ್ಲ ಮಾಡ್ತೀವಿ ಸರ್, ದಯವಿಟ್ಟು ಪೋಸ್ಟ್ ಮಾರ್ಟಂ ನಡೆಸಲು ಅವಕಾಶ ಕೊಡಿ ಅನ್ನುತ್ತಾರೆ ಎಸ್ ಪಿ.

ಅಮೇಲೆ ರೇವಣ್ಣ ಯಾವುದೋ ಒಂದು ಕಾಗದದ ಮೇಲೆ ಸಹಿ ಹಾಕಿ ಕೊಡಿ ಅನ್ನುತ್ತಾರೆ. ಎಸ್ ಪಿ ಅದನ್ನೂ ಮಾಡುತ್ತಾರೆ. ಮತ್ಯಾವುದೋ ವಿಷಯಕ್ಕೆ ಅವರು ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ಉಲ್ಲೇಖಿಸುತ್ತಾರೆ. ಎಸ್ ಪಿ ಅವರಿಗೆ ನಿಮ್ಮ ಬಗ್ಗೆ ತುಂಬಾ ಗೌರವ ಇದೆ ಅಂತಲೂ ರೇವಣ್ಣ ಹೇಳುತ್ತಾರೆ.

ಎಸ್ ಪಿ ಮಾತ್ರ ತಾಳ್ಮೆಯಿಂದಲೇ ಮಾತಾಡಿ ಅಂತಿಮವಾಗಿ ಅವರ ಮನವೊಲಿಸುವಲ್ಲಿ ಯಶ ಕಾಣುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.