AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳರ ಪತ್ತೆಗೆ ಅಂಗಡಿಗಳಿಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನೇ ಕದ್ದ ಖದೀಮ

ಕಳ್ಳರ ಪತ್ತೆಗೆ ಅಂಗಡಿಗಳಿಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನೇ ಕದ್ದ ಖದೀಮ

ಮಾಲಾಶ್ರೀ ಅಂಚನ್​
|

Updated on: Sep 19, 2025 | 6:40 PM

Share

ಕಳ್ಳರ ಪತ್ತೆಗೆ ಅಳವಡಿಸಿದ್ದಂತಹ ಸಿಸಿ ಟಿವಿ ಕ್ಯಾಮೆರಾಗಳ ಕಳ್ಳತನ ನಡೆದ ಘಟನೆ ಹಾಸನದ ಹೊಳೆನರಸೀಪುರದಲ್ಲಿ ನಡೆದಿದೆ. ಪೊಲೀಸರ ಸೂಚನೆ ಮೇರೆಗೆ ಬೀದಿಯಲ್ಲಿ ಅಂಗಡಿಗಳ ಮುಂದೆ ಅಂಗಡಿ ಮಾಲೀಕರು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಆದರೆ ಇದೀಗ ಖದೀಮನೊಬ್ಬ ಆ ಸಿಸಿ ಕ್ಯಾಮರಾವನ್ನೇ ಕಳ್ಳತನ ಮಾಡಿದ್ದಾರೆ.

ಹಾಸನ, ಸೆಪ್ಟೆಂಬರ್‌ 19:  ಕಳ್ಳತನ, ಅಪರಾಧಗಳನ್ನು ತಡೆಯುವುದು ಮತ್ತು ಅವುಗಳನ್ನು ದಾಖಲಿಸುವ ಸಲುವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು (CCTV camera) ಅಳವಡಿಸುತ್ತಾರೆ. ಆದರೆ ಇದೀಗ ಅದೇ ಕ್ಯಾಮೆರಾವನ್ನು ಖದೀಮನೊಬ್ಬ ಕಳ್ಳತನ ಮಾಡಿದ್ದಾನೆ. ಹಾಸನದ ಹೊಳೆನರಸೀಪುರ ಪೇಟೆ ಬೀದಿಯಲ್ಲಿ ಪೊಲೀಸರ ಸೂಚನೆಯ ಮೇರೆಗೆ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ 3 ಸಿಸಿ ಕ್ಯಾಮೆರಾವನ್ನು ಕಳ್ಳನೊಬ್ಬ ಕದ್ದಿದ್ದಾನೆ.  ನಮ್ಮ ಸೇಫ್ಟಿಗಾಗಿ ನಾವು ಅಳವಿಡಿಸಿದ ಕ್ಯಾಮೆರಾಗಳನ್ನೇ ಕದ್ದರೆ ಏನು ಕಥೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಎಲ್ಲಾ ವರ್ತಕರು ಹಾಗೂ ಮನೆಯವರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಡಿ ಎಂದು ಸ್ಥಳೀಯರೊಬ್ಬರು ಕೇಳಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ