ಹೆಂಡ್ತಿ ಮೇಲಿನ ಅನುಮಾನಕ್ಕೆ ತನ್ನ ಸ್ನೇಹಿತನ ಪ್ರಾಣ ತೆಗೆದ ವ್ಯಕ್ತಿ
ಹೆಂಡ್ತಿ ಮೇಲಿನ ಅನುಮಾನಕ್ಕೆ ತನ್ನ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದಂತಹ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಆ ಹುಡುಗನ ಜೊತೆ ಮೆಸೇಜ್ ಮಾಡ್ತಿಯಾ, ಕಾಲ್ ಮಾಡ್ತೀಯಾ ಎಂದು ಹೆಂಡ್ತಿ ಮೇಲೆ ಗಂಡ ಅನುಮಾನ ಪಡುತ್ತಿದ್ದ. ಇದೀಗ ಈ ಅನುಮಾನದ ಕಾರಣದಿಂದಾಗಿ ಆ ವ್ಯಕ್ತಿ ತನ್ನ ಸ್ನೇಹಿತನನ್ನು ಕೊಲೆ ಮಾಡಿದ್ದಾನೆ.
ಚಿಕ್ಕೋಡಿ, ಸೆಪ್ಟೆಂಬರ್, 19: ಅಕ್ರಮ ಸಂಬಂಧದ (illicit relationship) ಶಂಕೆಯ ಕಾರಣದಿಂದಾಗಿ ಸುಂದರ ಸಂಸಾರಗಳು ಹಾಳಾದಂತಹ ಕೊಲೆಗಳು ನಡೆದಂತಹ ಅದೆಷ್ಟೋ ಘಟನೆಗಳು ನಡೆದಿವೆ. ಅಂತಹದ್ಧೇ ಆಘಾತಕಾರಿ ಘಟನೆಯೊಂದು ಚಿಕ್ಕೋಡಿಯಲ್ಲಿ ನಡೆದಿದ್ದು, ಹೆಂಡ್ತಿಯೊಂದಿಗಿನ ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ ಬಸವರಾಜ್ ಬುಕನಟ್ಟಿ ಎಂಬಾತ ತನ್ನ ಸ್ನೇಹಿತನನ್ನು ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದೇ ಅನುಮಾನದಿಂದ ಕೊಲೆ ಮಾಡಿದ ಈ ವ್ಯಕ್ತಿ ತನ್ನ ಹೆಂಡ್ತಿ ಜೊತೆನೂ ಆ ಹುಡುಗನ ಜೊತೆ ಮೆಸೇಜ್ ಮಾಡ್ತಿಯಾ, ಕಾಲ್ ಮಾಡ್ತೀಯಾ ಎಂದು ಪ್ರತಿದಿನ ಕುಡಿದು ಬಂದು ಜಗಳ ಮಾಡುತ್ತಿದ್ದನು. ಇದೀಗ ಇದೇ ಸಿಟ್ಟಿನಲ್ಲಿ ತನ್ನ ಸ್ನೇಹಿತ ಮಹಾಂತೇಶ್‌ನ ಪ್ರಾಣ ತೆಗೆದಿದ್ದಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

