ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ

Updated By: ಗಂಗಾಧರ​ ಬ. ಸಾಬೋಜಿ

Updated on: Jun 20, 2025 | 3:05 PM

ಬೇಲೂರು ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಲಾರಿಯ ಹಿಂಬದಿಯ ಚಕ್ರಗಳು ಏಕಾಏಕಿ ಕಳಚಿ ಬಿದ್ದವು. ರಸ್ತೆಯಲ್ಲಿ ಉರುಳುತ್ತಾ ಹೋಗಿ ರಸ್ತೆ ಬದಿಯ ಆಟೋಗೆ ಡಿಕ್ಕಿ ಹೊಡೆದಿವೆ. ಆಟೋ ಹಾನಿಗೊಳಗಾಗಿದ್ದು, ಚಾಲಕನ ಜಾಗರೂಕತೆಯಿಂದ ದೊಡ್ಡ ಅಪಾಯ ತಪ್ಪಿದೆ. ಸಿಸಿಟಿವಿಯಲ್ಲಿ ಈ ಘಟನೆ ದೃಶ್ಯ ಸೆರೆಯಾಗಿದೆ.

ಹಾಸನ, ಜೂನ್​ 20: ವೇಗವಾಗಿ ಚಲಿಸುತ್ತಿದ್ದ ಲಾರಿಯ ಚಕ್ರಗಳು ಏಕಾಏಕಿ ಕಳಚಿ ರಸ್ತೆ ಬದಿ ನಿಂತಿದ್ದ ಆಟೋಗೆ ಡಿಕ್ಕಿ (collision) ಅಪ್ಪಳಿಸಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಬಳಿ ನಡೆದಿದೆ. ಟಯರ್ ಡಿಕ್ಕಿ ರಭಸಕ್ಕೆ ಅಟೋ ಸಂಪೂರ್ಣ ಜಖಂ ಆಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಚಕ್ರಗಳು ಕಳಚಿಕೊಂಡು ಆಟೋಗೆ ಅಪ್ಪಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.