ಸಿದ್ದೇಶ್ವರ ಅವರ ಮನೆಗೆ ಹೋಗಿದ್ದು ಸತ್ಯ, ಅದರೆ ಭೇಟಿಯನ್ನು ಅಪಾರ್ಥ ಭಾವಿಸುವ ಅವಶ್ಯಕತೆಯಿಲ್ಲ: ಸೋಮಣ್ಣ
ಸೋಮಣ್ಣ ಅವರು ಬೇರೆ ಬಿಜೆಪಿ ನಾಯಕನ ಮನೆಗೆ ಹೋಗಿದ್ದರೆ ಯಾರೂ ಅದರ ಬಗ್ಗೆ ಯಾರೂ ಕುತೂಹಲ ತಳೆಯುತ್ತಿರಲಿಲ್ಲ, ಅದರೆ ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡವರು, ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಸಬೇಕೆಂದು ಹೇಳಿದವರು, ಹಾಗಾಗಿ, ಸೋಮಣ್ಣ ಮಾಜಿ ಸಚಿವನ ಮನೆಗೆ ಹೋಗಿದ್ದು ಒಂದಷ್ಟು ಕುತೂಹಲವನ್ನಂತೂ ಮೂಡಿಸಿದೆ.
ಬೆಂಗಳೂರು, ಜೂನ್ 20: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ (GM Siddeshwara) ಅವರ ಮನೆಗೆ ತಾನು ಹೋಗಿದ್ದು ನಿಜ, ಅದರೆ ಅದನ್ನು ಅಪಾರ್ಥವಾಗಿ ಭಾವಿಸೋದು ಬೇಡ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು. ಕಾರಲ್ಲಿ ಕೂತೇ ಅವಸರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಐದನೇ ತಾರೀಖು ಅವರ ಮನೆಯಲ್ಲಿ ಮದುವೆಯಿತ್ತು, ಅವತ್ತು ಇಲಾಖೆಯ ಕಾರ್ಯಕ್ರಮದ ನಿಮಿತ್ತ ತಾನು ಜಮ್ಮುನಲ್ಲಿದ್ದ ಕಾರಣ ಅಟೆಂಡ್ ಮಾಡಲಾಗಿರಲಿಲ್ಲ, ಹಾಗಾಗಿ ವಿಶ್ ಮಾಡಲು ಹೋಗಿದ್ದೆ, ಅವರು ಬಿಜೆಪಿಯ ಹಿರಿಯ ನಾಯಕರು, ತಾನು ಮತ್ತು ಅವರು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದು ಸೋಮಣ್ಣ ಹೇಳಿದರು.
ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಏನನ್ನೂ ಯೋಚಿಸಿಲ್ಲ : ವಿ ಸೋಮಣ್ಣ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos