ಮಹಿಳೆಯರು ದಾರಿ ತಪ್ಪುತ್ತಿಲ್ಲ ಕುಮಾರಣ್ಣ, ನಿಮ್ಮ ಕುಟುಂಬದ ಕುಡಿ ತಪ್ಪಿಸುತ್ತಿದ್ದಾನೆ: ಹಾಸನದ ಮಹಿಳೆ

|

Updated on: Apr 30, 2024 | 11:04 AM

ಕುಮಾರಸ್ವಾಮಿಯವರು ರಾಜ್ಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಅಂತ ಹೇಳಿದ್ದರಲ್ಲ? ಅವರು ಈ ಕಾರಣಕ್ಕೆ ಹೇಳಿದ್ದರೆಂದು ಗೊತ್ತಿರಲಿಲ್ಲ! ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿಲ್ಲ ತಮ್ಮ ಕುಟುಂಬ ಕುಡಿಯೊಬ್ಬ ದಾರಿ ಅವರನ್ನು ತಪ್ಪಿಸುತ್ತಿರುವನೆಂದು ಅವರಿಗೆ ಈಗ ಅರ್ಥವಾಗಿರಬಹುದು ಎಂದು ಮಹಿಳೆ ಹೇಳಿದರು.

ಹಾಸನ: ಹಲವಾರು ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿ ತಲೆಮರೆಸಿಕೊಂಡಿರುವ ಅರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ. ಹಾಸನದಲ್ಲಿ ಮಹಿಳೆಯರು ಪ್ರಜ್ವಲ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪ್ರತಿಭಟನಾನಿರತ ಮಹಿಳೆಯೊಬ್ಬರು, ಹೆಚ್ ಡಿ ದೇವೇಗೌಡರ (HD Devegowda family) ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು. ಪ್ರಜ್ವಲ್ ತಾತ ಒಬ್ಬ ಮಾಜಿ ಪ್ರಧಾನಿಯಾಗಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಿಲ್ಲ, ಅದೇ ಒಂದು ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬ ಹೀಗೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದರೆ ಪೊಲೀಸರು ಸುಮ್ಮನಿರುತ್ತಿದ್ದರೇ? ಕುಮಾರಸ್ವಾಮಿಯವರು (HD Kumaraswamy) ರಾಜ್ಯ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಅಂತ ಹೇಳಿದ್ದರಲ್ಲ? ಅವರು ಈ ಕಾರಣಕ್ಕೆ ಹೇಳಿದ್ದರೆಂದು ಗೊತ್ತಿರಲಿಲ್ಲ! ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿಲ್ಲ ತಮ್ಮ ಕುಟುಂಬ ಕುಡಿಯೊಬ್ಬ ದಾರಿ ಅವರನ್ನು ತಪ್ಪಿಸುತ್ತಿರುವನೆಂದು ಅವರಿಗೆ ಈಗ ಅರ್ಥವಾಗಿರಬಹುದು ಎಂದು ಮಹಿಳೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಡಿಯೋ ಕೇಸ್‌: ಪ್ರಜ್ವಲ್ ರೇವಣ್ಣ ತಪ್ಪು ಸಾಬೀತಾದ್ರೆ ಏನು ಶಿಕ್ಷೆ? ಕಾನೂನಿನಲ್ಲಿರುವ ಅವಕಾಶಗಳೇನು?