ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವದ ಸಿದ್ಧತೆಗಳ ಕುರಿತು ನಡೆದ ಸಭೆಯಲ್ಲಿ ಸಚಿವ ಶಿವಲಿಂಗೇಗೌಡ ಅವರು ವೆಚ್ಚ ಕಡಿತಕ್ಕೆ ಒತ್ತು ನೀಡಿದರು. ಸಾರ್ವಜನಿಕರ ಹಣವನ್ನು ಮಿತವ್ಯಯದಿಂದ ಬಳಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ತಾತ್ಕಾಲಿಕ ಸಿಬ್ಬಂದಿಯ ಟೀ-ಶರ್ಟ್‌ಗಳ ವೆಚ್ಚವನ್ನು ಕಡಿಮೆ ಮಾಡುವಂತೆ ಅವರು ಗುತ್ತಿಗೆದಾರರೊಂದಿಗೆ ಚೌಕಾಸಿ ನಡೆಸಿದರು.
ಹಾಸನ, ಅಕ್ಟೋಬರ್ 09: ಹಾಸನಾಂಬೆ ಉತ್ಸವ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವ ಸಭೆ ನಡೆಯಿತು. ‘ಸಭೆಯಲ್ಲಿ ಕಾಮಗಾರಿಗಳ ಬಿಲ್ ಕಡಿಮೆ ಮಾಡುವಂತೆ ಗುತ್ತಿಗೆದಾರನ ಜತೆ ಶಿವಲಿಂಗೇಗೌಡ ಚೌಕಾಸಿ ಮಾಡಿದರು. ಇದು ಭಕ್ತಾದಿಗಳ ದುಡ್ಡು, ಸರ್ಕಾರದ ದುಡ್ಡಲ್ಲ. ದೇವರ ಕೆಲಸ ಮಾಡುತ್ತಿದ್ದೀರಾ ದರ ಸ್ವಲ್ಪ ಕಡಿಮೆ ಮಾಡಪ್ಪ ಎಂದು’ ಚೌಕಾಸಿ ಮಾಡಿದರು. ಜೊತೆಗೆ ‘ಕೆಲಸ ಚೆನ್ನಾಗಿ ಮಾಡದಿದ್ದರೆ ನಾನು ಬಿಲ್ ಕೊಡುವುದಿಲ್ಲ’ ಎಂದು ಕೂಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ

