ಎರಡು ವರ್ಷಗಳ ಕಾಲ ರಾಜಕೀಯದಿಂದ ದೂರ ಇರುವ ದೃಢ ಸಂಕಲ್ಪ ಮಾಡಿಕೊಂಡಿದ್ದೇನೆ: ರಮೇಶ್ ಜಾರಕಿಹೊಳಿ

|

Updated on: Oct 30, 2023 | 2:40 PM

ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿರುವರೆಂದು ಶಿವಕುಮಾರ್ ಹೇಳಿರುವ ಬಗ್ಗೆ ಕೇಳಿದಾಗ, 4-5 ಜನ ಇರಬಹುದು, ಅವರು ಲಾಟರಿ ಶಾಸಕರು, ಒಮ್ಮೆ ಮಾತ್ರ ಶಾಸಕರಾಗುವ ಯೋಗ್ಯತೆ ಇರೋರು, ಎರಡನೇ ಸಲ ಅವರು ಆರಿಸಿ ಬರಲಾರರು ಎಂದು ರಮೇಶ್ ಹೇಳಿದರು.

ಬೆಳಗಾವಿ: ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ರಾಜಕೀಯ ಚಟುವಟಿಕೆಗಳಿಂದ ತಾತ್ಕಾಲಿಕ ಸನ್ಯಾಸತ್ವ ತೆಗೆದುಕೊಂಡಿದ್ದಾರೆ! ಇದನ್ನು ನಾವು ಹೇಳುತ್ತಿಲ್ಲ ಮಾರಾಯ್ರೇ ಅವರೇ ಇಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡುವಾಗ ಹೇಳಿದರು. ಬಹಳ ದಿನಗಳಿಂದ ಮಾಧ್ಯಮ ಮುಂದೆ ಬಾರದ ಅವರು, ಡಿಕೆ ಶಿವಕುಮಾರ್ (DK Shivakumar) ಮತ್ತವರ ನಾಟಕ ಮಂಡಳಿ ಆಪರೇಶನ್ ಕಮಲದ (Operation Lotus) ಬಗ್ಗೆ ಸುಖಾಸುಮ್ಮನೆ ಸುದ್ದಿಗಳನ್ನು ಹಬ್ಬಿಸುತ್ತಿರುವುದರಿಂದ ಅನಿವಾರ್ಯವಾಗಿ ಸುದ್ದಿಗೋಷ್ಟಿ ನಡೆಸಬೇಕಾಯಿತು ಅಂತ ಹೇಳಿದರು. ರಾಜ್ಯದಲ್ಲಿ ಸರ್ಕಾರ ಉರುಳುವಂಥ ಕೆಲಸವೇನೂ ನಡೆಯಲ್ಲ, ಅಧಿಕಾರ ಒಂದು ವೇಳೆ ಬದಲಾವಣೆಯಾಗಿದ್ದೇಯಾದರೆ, ಮಹಾರಾಷ್ಟ್ರದಲ್ಲಾದಂತೆ ನಡೆಯಲಿದೆ ಎಂದು ಅವರು ಹೇಳಿದರು. ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿರುವರೆಂದು ಶಿವಕುಮಾರ್ ಹೇಳಿರುವ ಬಗ್ಗೆ ಕೇಳಿದಾಗ, 4-5 ಜನ ಇರಬಹುದು, ಅವರು ಲಾಟರಿ ಶಾಸಕರು, ಒಮ್ಮೆ ಮಾತ್ರ ಶಾಸಕರಾಗುವ ಯೋಗ್ಯತೆ ಇರೋರು, ಎರಡನೇ ಸಲ ಅವರು ಆರಿಸಿ ಬರಲಾರರು ಎಂದು ರಮೇಶ್ ಹೇಳಿದರು. ಮುಂದಿನ ಎರಡು ವರ್ಷಗಳ ಕಾಲ ರಾಜಕೀಯದಿಂದ ದೂರವುಳಿದು, ಮನೆ ಮತ್ತು ದೇವಸ್ಥಾನದ ಕಡೆ ಗಮನ ನೀಡುವ ದೃಢಸಂಕಲ್ಪ ಮಾಡಿಕೊಂಡಿರುವುದಾಗಿ ಬಿಜೆಪಿ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ