ಅಡ್ವಾಣಿಯವರಿಗೆ ಭಾರತ ರತ್ನ ಗೌರವದ ಬಗ್ಗೆ ತಕರಾರಿಲ್ಲ, ಶಿವಕುಮಾರ ಸ್ವಾಮೀಜಿ ಅವರನ್ನೂ ಪರಿಗಣಿಸಬೇಕೆಂದು ಒತ್ತಾಯ: ಡಿಕೆ ಶಿವಕುಮಾರ್

|

Updated on: Feb 03, 2024 | 5:51 PM

ಕರ್ನಾಟಕದಲ್ಲಿ ಅನ್ನ ದಾಸೋಹದ ಪರಂಪರೆ ಇದೆ, ಅದಕ್ಕೊಂದು ಹೊಸ ಭಾಷ್ಯ ಬರೆದ ಮತ್ತು ನಡೆದಾಡುವ ದೇವರೆಂದು ಖ್ಯಾತರಾಗಿದ್ದ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಗೌರವದಿಂದ ಸನ್ಮಾನಿಬೇಕೆನ್ನುವುದು ತಮ್ಮ ಸರ್ಕಾರದ ಒತ್ತಾಯವಾಗಿದೆ ಎಂದು ಶಿವಕುಮಾರ್ ಹೇಳಿದರು.

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಸಂಸ್ಥಾನದ ಹಿರೇಮಠದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಲಿಂಗೈಕ್ಯ ಶಿವಕುಮಾಮರ್ ಸ್ವಾಮೀಜುಯವರಿಗೆ (Shivakumar Swamiji) ಮರಣೋತ್ತರವಾಗಿ ಭಾರತ ರತ್ನ (Bharat Ratna) ಸಿಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಎಲ್ ಕೆ ಅಡ್ವಾಣಿಯವರು ನಮ್ಮ ದೇಶದ ಹಿರಿಯ ರಾಜಕಾರಣಿಯಾಗಿದ್ದಾರೆ, ಅವರಿಗೆ ಭಾರತ ರತ್ನ ಗೌರವದಿಂದ ಸನ್ಮಾನಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಕ್ಕೆ ತಮ್ಮದೇನೂ ತಕರಾರಿಲ್ಲ ಎಂದು ಹೇಳಿದ ಶಿವಕುಮಾರ್ ಸ್ವಾಮೀಜಿಯವರಿಗೂ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು ಎಂದರು. ಕರ್ನಾಟಕದಲ್ಲಿ ಅನ್ನ ದಾಸೋಹದ ಪರಂಪರೆ ಇದೆ, ಅದಕ್ಕೊಂದು ಹೊಸ ಭಾಷ್ಯ ಬರೆದ ಮತ್ತು ನಡೆದಾಡುವ ದೇವರೆಂದು ಖ್ಯಾತರಾಗಿದ್ದ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಗೌರವದಿಂದ ಸನ್ಮಾನಿಬೇಕೆನ್ನುವುದು ತಮ್ಮ ಸರ್ಕಾರದ ಒತ್ತಾಯವಾಗಿದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on