ಅನುದಾನ ಹಂಚಿಕೆ ಸಮರ್ಥಿಸಿಕೊಳ್ಳುವ ಭರದಲ್ಲಿ ಆರ್ ಅಶೋಕ ಅತಾರ್ಕಿಕ ವಾದ ಮಂಡಿಸುತ್ತಾರೆ!
ಅವರು ಊಟದಲ್ಲಿನ ಬಗೆಗಳ ಬಗ್ಗೆ ಮಾತಾಡುತ್ತಾರೆ. ಆದರೆ ಪ್ರಶ್ನೆ ಎದ್ದಿರೋದು ಊಟದ ಪ್ರಮಾಣದ ಬಗ್ಗೆ. ಒಬ್ಬಟ್ಟು ಊಟ ಯಾರೂ ಕೇಳಿಲ್ಲ; ಮುದ್ದೆನೋ, ರೋಟ್ಟಿಯೋ ಅಥವಾ ಅನ್ನವೋ ಅದನ್ನು ಸಮಾನವಾಗಿ ಹಂಚಿ ಅನ್ನೋದು ಚರ್ಚೆಯ ವಸ್ತುವಾಗಿದೆ.
ಬೆಂಗಳೂರು: ಬಿಜೆಪಿಯ ರಾಜ್ಯ ಘಟಕ ರಾಜ್ಯದಲ್ಲಿ ಕೆಲ ಉತ್ತಮ ವಕ್ತಾರರನ್ನು ನೇಮಕ ಮಾಡುವುದು ಬೆಟರ್ ಅನಿಸುತ್ತೆ. ಸೂಕ್ಷ್ಮ ಮತ್ತು ಗಂಭೀರ ವಿಷಯಗಳ ಚರ್ಚೆ ಎದ್ದಾಗ ವಿರೋಧ ಪಕ್ಷದ ನಾಯಕರಾಗಿರುವ ಅರ್ ಅಶೋಕ (R Ashoka) ಅವರನ್ನು ಮಾಧ್ಯಮಗಳ ಮುಂದೆ ಕೂರಿಸಿದಾಗ ಅತಾರ್ಕಿಕ (illogical) ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಅನುದಾನ ಹಂಚಿಕೆಯಲ್ಲಿ (grants distribution) ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ ಮತ್ತು ಅದೇ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಎಲ್ಲ ಸದಸ್ಯರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕೂಡ ಮುಂದಾಗಿದ್ದಾರೆ. ರಾಜ್ಯಕ್ಕೆ ಸಿಕ್ಕಿರುವ ಕಡಿಮೆ ಅನುದಾನವನ್ನು ಅಶೋಕ ಸಮರ್ಥಿಸಿಕೊಳ್ಳ್ಳುವ ರೀತಿ ವಿಚಿತ್ರವೆನಿಸುತ್ತದೆ ಮತ್ತು ಹಾಸ್ಯಾಸ್ಪದವಾಗಿದೆ. ತಾಯಿ ಮತ್ತು ಮಕ್ಕಳ ನಿದರ್ಶನವನ್ನು ಅವರು ನೀಡುತ್ತಾರೆ.
ತಾಯಿ ತನ್ನ ಮಕ್ಕಳಿಗೆ ಊಟ ನೀಡುವಾಗ ತಾರತಮ್ಯ ಮಾಡಲ್ಲ, ಜಾಸ್ತಿ ಸಂಪಾದನೆ ಮಾಡೋನಿಗೆ ಒಬ್ಬಟ್ಟು ಕಡಿಮೆ ದುಡಿಯುವವನಿಗೆ ಒಬ್ಬಟ್ಟು ಇಲ್ಲದ ಊಟ ನೀಡಲ್ಲ, ಹಾಗೆಯೇ ಕೇಂದ್ರ ಸರ್ಕಾರ ಸಹ ರಾಜ್ಯಗಳ ನಡುವೆ ಭೇದಭಾವ ಮಾಡದೆ ಅನುದಾನ ಹಂಚುತ್ತದೆ, ಇದನ್ನು ಅರ್ಥ ಮಾಡಿಕೊಳ್ಳುವಷ್ಟು ಸಾಮಾನ್ಯ ಜ್ಞಾನವೂ ಸಿದ್ದರಾಮಯ್ಯರಿಗಿಲ್ಲ ಅನ್ನುತ್ತಾರೆ. ಅವರು ಹೇಳುವ ತರ್ಕ ಅರ್ಥವಾಗಲ್ಲ, ಅವರು ಊಟದಲ್ಲಿನ ಬಗೆಗಳ ಬಗ್ಗೆ ಮಾತಾಡುತ್ತಾರೆ. ಆದರೆ ಪ್ರಶ್ನೆ ಎದ್ದಿರೋದು ಊಟದ ಪ್ರಮಾಣದ ಬಗ್ಗೆ. ಒಬ್ಬಟ್ಟು ಊಟ ಯಾರೂ ಕೇಳಿಲ್ಲ; ಮುದ್ದೆನೋ, ರೋಟ್ಟಿಯೋ ಅಥವಾ ಅನ್ನವೋ ಅದನ್ನು ಸಮಾನವಾಗಿ ಹಂಚಿ ಅನ್ನೋದು ಚರ್ಚೆಯ ವಸ್ತುವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ