ಸಂಯುಕ್ತಾ ಪಾಟೀಲ್ ಪರ ಪ್ರಚಾರಕ್ಕೆ ಹೋಗುತ್ತಿಲ್ಲ, ಪತಿ ಹೇಳಿದ್ದು ಸಹ ಸುಳ್ಳು: ವೀಣಾ ಕಾಶಪ್ಪನವರ್

| Updated By: ರಮೇಶ್ ಬಿ. ಜವಳಗೇರಾ

Updated on: Apr 05, 2024 | 7:48 PM

ಸಚಿವ ಮತ್ತು ಸಂಯುಕ್ತ ಪಾಟೀಲ್ ತಂದೆ ಶಿವಾನಂದ ಪಾಟೀಲ್ ಇಲ್ಕಲ್ ನಲ್ಲಿರುವ ವೀಣಾ ಅವರ ಮನೆಗೆ ಭೇಟಿ ನೀಡಿದ ಸಂಗತಿಯೂ ಕ್ಷೇತ್ರದಲ್ಲಿ ಹಬ್ಬಿದ್ದು ಅದೂ ಸಹ ಸುಳ್ಳು ಎಂದು ವೀಣಾ ಹೇಳುತ್ತಾರೆ. ಅನಾರೋಗ್ಯದ ಕಾರಣ ತಾನು ಕೆಲದಿಗಳಿಂದ ಬೆಂಗಳೂರಲ್ಲಿರುವುದರಿಂದ ಸಚಿವರು ತನ್ನನ್ನು ಇಲ್ಕಲ್ ನಲ್ಲಿ ಭೇಟಿ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ವೀಣಾ ಹೇಳುತ್ತಾರೆ.

ಬಾಗಲಕೋಟೆ: ಬಾಗಲಕೋಟೆಯಲ್ಲಿ ಹರಿದಾಡುತ್ತಿರುವ ಕೆಲ ವದಂತಿಗಳ ಬಗ್ಗೆ ಕಾಂಗ್ರೆಸ್ ನಾಯಕಿ ಮತ್ತು ಹುನುಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಅವರ ಪತ್ನಿ ವೀಣಾ ಕಾಶಪ್ಪನವರ್ (Veena Kashappanavar) ಒಂದು ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ (Samyukta Patil) ಪರವಾಗಿ ತಾನು ಪ್ರಚಾರಕ್ಕೆ ಹೊಗುವ ಬಗ್ಗೆ ತನ್ನ ಪತಿ ಮತ್ತು ಬೇರೆ ಸಚಿವರು ಹೇಳಿದ್ದು ಸತ್ಯಕ್ಕೆ ದೂರವಾದ ಸಂಗತಿ, ಅಂಥ ನಿರ್ಧಾರವನ್ನು ತಾನು ತೆಗೆದುಕೊಂಡಿಲ್ಲ ಎಂದು ವೀಣಾ ಹೇಳುತ್ತಾರೆ. ತನ್ನ ಪತಿ ಹೇಳಿದ್ದನ್ನೂ ವೀಣಾ ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದರೆ ಅವರಲ್ಲಿ ಮಡುಗಟ್ಟಿರುವ ನಿರಾಶೆ, ಹತಾಶೆ, ಬೇಸರವನ್ನು ಗುರುತಿಸಬಹುದು. ಸಚಿವ ಮತ್ತು ಸಂಯುಕ್ತ ಪಾಟೀಲ್ ತಂದೆ ಶಿವಾನಂದ ಪಾಟೀಲ್ ಇಲ್ಕಲ್ ನಲ್ಲಿರುವ ವೀಣಾ ಅವರ ಮನೆಗೆ ಭೇಟಿ ನೀಡಿದ ಸಂಗತಿಯೂ ಕ್ಷೇತ್ರದಲ್ಲಿ ಹಬ್ಬಿದ್ದು ಅದೂ ಸಹ ಸುಳ್ಳು ಎಂದು ವೀಣಾ ಹೇಳುತ್ತಾರೆ. ಅನಾರೋಗ್ಯದ ಕಾರಣ ತಾನು ಕೆಲದಿಗಳಿಂದ ಬೆಂಗಳೂರಲ್ಲಿರುವುದರಿಂದ ಸಚಿವರು ತನ್ನನ್ನು ಇಲ್ಕಲ್ ನಲ್ಲಿ ಭೇಟಿ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ವೀಣಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ: ಪಕ್ಷಕ್ಕೆ‌ ರುಂಡ ಕೊಡ್ತೀನಿ, ವೈಯಕ್ತಿಕ ಬಂದರೆ ಯಾವ‌ ಮಗನಿಗೂ ಬಗ್ಗೋದಿಲ್ಲ: ವಿಜಯಾನಂದ‌ ಕಾಶಪ್ಪನವರ್

Published on: Apr 05, 2024 05:14 PM