ಮನೆ ಹೆಣ್ಣುಮಕ್ಕಳ ಮೇಲೆ ಸದಾ ನಿಗಾ ಇಟ್ಟಿರಬೇಕೆನ್ನುವ ಶಿವಕುಮಾರ್ ನಿಂದ ನಾನೇನೂ ಕಲಿಯಬೇಕಿಲ್ಲ: ಹೆಚ್ ಡಿ ಕುಮಾರಸ್ವಾಮಿ

|

Updated on: Apr 16, 2024 | 3:00 PM

ಆಡಿಯೋದಲ್ಲಿ ಶಿವಕುಮಾರ್ ಹೆಣ್ಣು ಮಕ್ಕಳ ಮೇಲೆ ಹೆಚ್ಚು ನಿಗಾ ಇಟ್ಟಿರಬೇಕು, ಅವರು ಮನೆಯಿಂದ ಹೊರಗೋದಾಗಿನಿಂದ ವಾಪಸ್ಸು ಬರೋವರೆಗೆ ಕಣ್ಣಿಟ್ಟರಬೇಕು ಅಂತೆಲ್ಲ ಹೇಳಿದ್ದಾರೆ. ಆಡಿಯೋ ಮುಗಿದ ಬಳಿಕ, ಇಂಥವರಿಂದ ತಾನು ಹೆಣ್ಣುಮಕ್ಕಳನ್ನು ಗೌರವಿಸಿದನ್ನು ಕಲಿಯಬೇಕಾ ಎಂದು ಕುಮಾರಸ್ವಾಮಿ ಪ್ರಶ್ನಿಸುತ್ತಾರೆ.

ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವಿನ ಜಗಳದ ಸ್ವರೂಪ ಮತ್ತು ವೈಖರಿ ಕನ್ನಡಿಗರಲ್ಲಿ ಹೇವರಿಕೆ ಹುಟ್ಟಿಸುತ್ತಿದೆ. ಅದು ಈಗ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ, ವೈಯಕ್ತಿಕ ತೋಜೋವಧೆಗೆ ಅಡಿಯಿರಿಸಿದೆ. ಕುಮಾರಸ್ವಾಮಿ ಗೃಹಲಕ್ಷ್ಮಿ ಯೋಜನೆಯಿಂದ (Grihalakshmi scheme) ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಅಂತ ಹೇಳಿದ ಬಳಿಕ ರಾಜ್ಯದ ಪ್ರಮುಖ ಸಮುದಾಯದ ಇಬ್ಬರು ಬಲಿಷ್ಠ ನಾಯಕರ ಕಾದಾಟ ತಾರಕಕ್ಕೇರಿದೆ. ಇಂದು ಬೆಂಗಳೂರಲ್ಲಿ ಕುಮಾರಸ್ವಾಮಿಯವರು ಶಿವಕುಮಾರ್ ಹೆಣ್ಣುಮಕ್ಕಳ ಬಗ್ಗೆ ಆಡಿದ ಮಾತಿನ ಆಡಿಯೋ ಕ್ಲಿಪ್ಪಿಂಗ್ ಒಂದನ್ನು ಮಾಧ್ಯಮಗಳ ಮುಂದೆ ಪ್ಲೇ ಮಾಡಿದರು. ಅದರಲ್ಲಿ ಶಿವಕುಮಾರ್ ಹೆಣ್ಣು ಮಕ್ಕಳ ಮೇಲೆ ಹೆಚ್ಚು ನಿಗಾ ಇಟ್ಟಿರಬೇಕು, ಅವರು ಮನೆಯಿಂದ ಹೊರಗೋದಾಗಿನಿಂದ ವಾಪಸ್ಸು ಬರೋವರೆಗೆ ಕಣ್ಣಿಟ್ಟರಬೇಕು ಅಂತೆಲ್ಲ ಹೇಳಿದ್ದಾರೆ, ಆಡಿಯೋ ಮುಗಿದ ಬಳಿಕ, ಇಂಥವರಿಂದ ತಾನು ಹೆಣ್ಣುಮಕ್ಕಳನ್ನು ಗೌರವಿಸಿದನ್ನು ಕಲಿಯಬೇಕಾ ಎಂದು ಕುಮಾರಸ್ವಾಮಿ ಪ್ರಶ್ನಿಸುತ್ತಾರೆ.

ಮಹಿಳೆಯ ಜಮೀನು ಕಬಳಿಸಿದ್ದು ಸುಳ್ಳು ಆರೋಪ ಅಂತ ಶಿವಕುಮಾರ್ ಹೇಳಿದ್ದಾರೆ ಅಂದಿದ್ದಕ್ಕೆ, ಶಿವಕುಮಾರ್ ಚೆಕ್ ನೀಡಿದ್ದು, ಅದು ಡಿಸಾನರ್ ಆಗಿದ್ದು ಎಲ್ಲ ದಾಖಲೆ ತನ್ನಲ್ಲಿದೆ ಎಂದ ಕುಮಾರಸ್ವಾಮಿ ಹೆಣ್ಣು ಮಗುವೊಂದನ್ನು ಅಪಹರಿಸಿದ ಕತೆಯೂ ತನಗೆ ಗೊತ್ತಿದೆ ಅಂತ ಹೇಳಿದರು. ಚರ್ಚೆಗೆ ಯಾವಾಗ ಅವರು ಕರೆದಿದ್ದರು, ಈಗಷ್ಟೇ ಅದನ್ನು ಕೇಳಿಸಿಕೊಳ್ಳುತ್ತಿದ್ದೇನೆ, ಚರ್ಚೆಗೆ ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆದರಿ ಓಡಿದ ಕುಮಾರಸ್ವಾಮಿ: ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲೇ ವಾಗ್ದಾಳಿ