ಬಳ್ಳಾರಿ; 23 ಲೋಕಸಭಾ ಕ್ಷೇತ್ರ ಸುತ್ತಿರುವೆ, ಹೋದೆಡೆಯೆಲ್ಲ ಜನರ ಬಾಯಲ್ಲಿ ಮೋದಿ ಜಪ!: ಬಿಎಸ್ ಯಡಿಯೂರಪ್ಪ

|

Updated on: Apr 16, 2024 | 7:44 PM

ಜನರ ಧೋರಣೆ ನೋಡುತ್ತಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ರಾಜ್ಯದ ಎಲ್ಲ 28 ಸ್ಥಾನಗಳು ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ತಮ್ಮ ಹಳೆಯ ಶಿಷ್ಯ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಉಲ್ಲೇಖಿಸಿದ ಯಡಿಯೂರಪ್ಪ, ಅವರು ಬಿಜೆಪಿಗೆ ವಾಪಸ್ಸು ಬಂದಿರೋದು ಈ ಭಾಗದಲ್ಲಿ ಪಕ್ಷಕ್ಕೆ ಆನೆಬಲ ತಂದಿದೆ ಎಂದರು.

ಬಳ್ಳಾರಿ: ಈಗಾಗಲೇ ಚರ್ಚಿಸಿದ ಹಾಗೆ 82-ವರ್ಷ-ವಯಸ್ಸಿನ ಬಿಎಸ್ ಯಡಿಯೂರಪ್ಪ (BS Yediyurappa) ಯುವಕರು ನಾಚುವ ಹಾಗೆ ಲೋಕಸಭಾ ಚುನಾವಣೆಯಲ್ಲಿ ಓಡಾಡುತ್ತಿದ್ದಾರೆ. ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ (Govind Karjol) ಪರ ಪ್ರಚಾರ ನಡೆಸಿದ ಬಳಿಕ ಅವರು ಮತ್ತೊಂದು ಬಿಸಿಲು ನಾಡು ಬಳ್ಳಾರಿಗೆ ಹೋಗಿ ಅಲ್ಲಿನ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು (B Sriramulu) ಪರ ಪ್ರಚಾರ ಮಾಡಿದರು. ಬಳ್ಳಾರಿಗೆ ಆಗಮಿಸುವ ಮೊದಲು 23 ಲೋಕಸಭಾ ಕ್ಷೇತ್ರಗಳಲ್ಲಿ ಸುತ್ತಾಡಿರುವುದಾಗಿ ಹೇಳಿದ ಯಡಿಯೂರಪ್ಪ, ಎಲ್ಲಾ ಕಡೆ ಜನರ ಬಾಯಿಂದ ಮೋದಿ ಮೋದಿ ಉದ್ಗಾರ ಹೊರಬೀಳುತ್ತಿದೆ ಎಂದರು. ಬಳ್ಳಾರಿಯಲ್ಲೂ ಅದೇ ಅಲೆ ಇದೆ ಮತ್ತು ತಮ್ಮ ಅಭ್ಯರ್ಥಿ ಶ್ರೀರಾಮುಲು ಭಾರೀ ಬಹುಮತದೊಂದಿಗೆ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಜನರ ಧೋರಣೆ ನೋಡುತ್ತಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ರಾಜ್ಯದ ಎಲ್ಲ 28 ಸ್ಥಾನಗಳು ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ತಮ್ಮ ಹಳೆಯ ಶಿಷ್ಯ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಉಲ್ಲೇಖಿಸಿದ ಯಡಿಯೂರಪ್ಪ, ಅವರು ಬಿಜೆಪಿಗೆ ವಾಪಸ್ಸು ಬಂದಿರೋದು ಈ ಭಾಗದಲ್ಲಿ ಪಕ್ಷಕ್ಕೆ ಆನೆಬಲ ತಂದಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚುನಾವಣೆ ಫಲಿತಾಂಶ ಬಂದಾಗ ಸಿದ್ದರಾಮಯ್ಯಗೆ ಯಾರು ಗೋ ಬ್ಯಾಕ್ ಯಾರು ಕಂ ಬ್ಯಾಕ್ ಅನ್ನೋದು ಗೊತ್ತಾಗಲಿದೆ: ಬಿಎಸ್ ಯಡಿಯೂರಪ್ಪ