ಬಿಜೆಪಿಯೊಂದಿಗೆ ಕೆಆರ್​ಪಿಪಿಯನ್ನು ವಿಲೀನಗೊಳಿಸಿದ ಜನಾರ್ಧನರೆಡ್ಡಿ, ಶ್ರೀರಾಮುಲುರನ್ನು ಆತ್ಮೀಯ ಸ್ನೇಹಿತ ಎಂದರು!

ಇಂದು ಬೆಜೆಪಿ ಸೇರಿದ ಬಳಿಕ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಜನಾರ್ಧನ ರೆಡ್ಡಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಮತ್ತು ತಮ್ಮೊಂದಿಗೆ ಕುಳಿತಿದ್ದ ಎಲ್ಲ ನಾಯಕರಿಗೆ ಧನ್ಯವಾದ ಹೇಳುವಾಗ ಶ್ರೀರಾಮುಲು ಅವರನ್ನು ಆತ್ಮೀಯ ಸ್ನೇಹಿತ ಅಂತ ಸಂಬೋಧಿಸಿದರು. ನಿಮಗೆ ನೆನಪಿರಬಹುದು, ವಿಧಾನಸಭಾ ಚುನಾವಣೆಗೆ ಮೊದಲು ಜನಾರ್ಧನ ರೆಡ್ಡಿಯನ್ನು ವಾವಸ್ಸು ಪಕ್ಷಕ್ಕೆ ಸೇರಿಸಲು ಶ್ರೀರಾಮುಲು ಭಗೀರಥ ಪ್ರಯತ್ನ ನಡೆಸಿದ್ದರು

ಬಿಜೆಪಿಯೊಂದಿಗೆ ಕೆಆರ್​ಪಿಪಿಯನ್ನು ವಿಲೀನಗೊಳಿಸಿದ ಜನಾರ್ಧನರೆಡ್ಡಿ, ಶ್ರೀರಾಮುಲುರನ್ನು ಆತ್ಮೀಯ ಸ್ನೇಹಿತ ಎಂದರು!
|

Updated on: Mar 25, 2024 | 11:53 AM

ಬೆಂಗಳೂರು: ಎರಡು ಸಂಗತಿಗಳು ಇವತ್ತು ನಗರದ ಬಿಜೆಪಿ ಕಚೇರಿಯಲ್ಲಿ ಸ್ಪಷ್ಟಗೊಂಡಿವೆ. ಒಂದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ತನ್ನ ಪಕ್ಷವನ್ನು ಬಿಜೆಪಿಯೊಂದಿಗೆ ವಿದ್ಯುಕ್ತವಾಗಿ ವಿಲೀನಗೊಳಿಸಿದ್ದಾರೆ ಮತ್ತು ಅವರ ಹಾಗೂ ಮಾಜಿ ಸಚಿವ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು (B Sriramulu) ನಡುವೆ ಯಾವುದೇ ವೈಮನಸ್ಸಿಲ್ಲ ಅನ್ನೋದು ಸಾಬೀತಾಗಿದೆ. ಕೆಲ ದಿನಗಳಿಂದ ಅವರಿಬ್ಬರು ವೈರಿಗಳಂತಲ್ಲದಿದ್ದರೂ, ದೋಸ್ತಿ ಮುರಿದುಬಿದ್ದು ಹೋಗಿರುವ ಹಾಗೆ ಹೇಳಿಕೆಗಳನ್ನು ನೀಡುತ್ತಿದ್ದರು. ಆದರೆ, ದೋಸ್ತಿ ಖಾಯಂ ಆಗಿದೆ. ಇಂದು ಬೆಜೆಪಿ ಸೇರಿದ ಬಳಿಕ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಜನಾರ್ಧನ ರೆಡ್ಡಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಮತ್ತು ತಮ್ಮೊಂದಿಗೆ ಕುಳಿತಿದ್ದ ಎಲ್ಲ ನಾಯಕರಿಗೆ ಧನ್ಯವಾದ ಹೇಳುವಾಗ ಶ್ರೀರಾಮುಲು ಅವರನ್ನು ಆತ್ಮೀಯ ಸ್ನೇಹಿತ ಅಂತ ಸಂಬೋಧಿಸಿದರು. ನಿಮಗೆ ನೆನಪಿರಬಹುದು, ವಿಧಾನಸಭಾ ಚುನಾವಣೆಗೆ ಮೊದಲು ಜನಾರ್ಧನ ರೆಡ್ಡಿಯನ್ನು ವಾವಸ್ಸು ಪಕ್ಷಕ್ಕೆ ಸೇರಿಸಲು ಶ್ರೀರಾಮುಲು ಭಗೀರಥ ಪ್ರಯತ್ನ ನಡೆಸಿದ್ದರು.

ಆದರೆ, ಬಿಜೆಪಿ ವರಿಷ್ಠರಿಗೆ ರೆಡ್ಡಿ ವಾಪಸ್ಸಾಗುವುದು ಬೇಕಿರಲಿಲ್ಲ. ಆದರೆ, ಕೆಆರ್ ಪಿಪಿಯ ಶಾಸಕನಾಗಿ ಆಯ್ಕೆಯಾದ ಬಳಿಕ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಮೆಚ್ಚಿ ಮಾತಾಡಲಾರಂಭಿಸಿದರು ಮತ್ತು ರಾಜ್ಯ ಬಿಜೆಪಿ ನಾಯಕರೊಂದಿಗಿದ್ದ ಉತ್ತಮ ಬಾಂಧವ್ಯವನ್ನು ಮುಂದುವರಿಸಿದರು. ಇದಕ್ಕೆ ಪೂರಕವಾಗಿ ಪಕ್ಷದಿಂದ ದೂರವಾದವರನ್ನು ವಾಪಸ್ಸು ಕರೆತರುವ ಕೆಲಸದಲ್ಲಿ ವಿಜಯೇಂದ್ರ ಯಶ ಕಾಣುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:    ಬಿಜೆಪಿ ಸೇರುವ ಯೋಚನೆಯಿಲ್ಲ ಆದರೆ ಅವರು ಬಯಸಿದರೆ ಹೊಂದಾಣಿಕೆಗೆ ಸಿದ್ಧನಿದ್ದೇನೆ: ಗಾಲಿ ಜನಾರ್ಧನ ರೆಡ್ಡಿ, ಶಾಸಕ

Follow us