ಪತಿಯನ್ನು ಎಳೆತರದೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿ ನನಗಿದೆ: ವೀಣಾ ಕಾಶಪ್ಪನವರ್, ಕಾಂಗ್ರೆಸ್ ನಾಯಕಿ
ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಧವಿಸಲ್ಲ, 28 ನೇ ತಾರೀಖು ಬೆಂಬಲಿಗರ ಸಭೆ ನಡೆಸಿ ಒಂದು ನಿರ್ಣಯ ತೆಗೆದುಕೊಳ್ಳಲಾಗುವುದು, ವರಿಷ್ಠರು ಹೆಸರು ಬದಲಾಯಿಸಿದರೆ ಸರಿ, ಇಲ್ಲದಿದ್ದರೆ ತನ್ನ ದಾರಿ ತನಗೆ ಎನ್ನುವ ವೀಣಾ ತನ್ನ ಪತಿ ಮತ್ತು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಹೊರಗಿಟ್ಟು ತಾನು ಸ್ಫರ್ಧಿಸುವುದಾಗಿ ಹೇಳಿದರು.
ಬಾಗಲಕೋಟೆ: ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ (Veena Kashappanavar) ಈಗಲೂ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗುವ ಬಗ್ಗೆ ಆಶಾವಾದಿಯಾಗಿದ್ದಾರೆ. ಬಿ ಫಾರ್ಮ್ (B Form) ನೀಡದ ಕಾರಣ ಕಾಲವಿನ್ನೂ ಮಿಂಚಿಲ್ಲ, ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ದೇವರಾಜ ಅವರನ್ನು ಬಾದಾಮಿ ಕ್ಷೇತ್ರದ ಅಭ್ಯರ್ಥಿ ಅಂತ ಪ್ರಕಟಿಸಿದ್ದರೂ ನಂತರ ಬಿಬಿ ಚಿಮ್ಮನಕಟ್ಟಿ (BB Chimmankatti) ಅವರಿಗೆ ಟಿಕೆಟ್ ನೀಡಲಾಗಿತ್ತು, ಹಾಗಾಗಿ ತನಗೆ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದು ರವಿವಾರ ರಾತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವೀಣಾ ಹೇಳಿದರು. ಬಾಗಲಕೋಟೆಯಿಂದ ಬೇರೆಯವರಿಗೆ ಟಿಕೆಟ್ ಸಿಕ್ಕಿರುವುದು ಕೇವಲ ತನ್ನ ಸಮುದಾಯ ಮಾತ್ರವಲ್ಲ ಬೇರೆ ಸಮುದಾಯದ ಜನರಿಗೂ ಆಘಾತವುಂಟು ಮಾಡಿದೆ, ಕಳೆದ 5 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ತನಗೆ ಹೇಗೆ ಟಿಕೆಟ್ ತಪ್ಪುವುದು ಸಾಧ್ಯ ಅಂತ ಬೇರೆ ಬೇರೆ ಜಿಲ್ಲೆಗಳ ಜನ ಸಹ ಫೋನ್ ಮಾಡಿ ಕೇಳುತ್ತಿದ್ದಾರೆ ಎಂದು ಹೇಳಿದ ವೀಣಾ ಹೇಳಿದರು. ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಧವಿಸಲ್ಲ, 28 ನೇ ತಾರೀಖು ಬೆಂಬಲಿಗರ ಸಭೆ ನಡೆಸಿ ಒಂದು ನಿರ್ಣಯ ತೆಗೆದುಕೊಳ್ಳಲಾಗುವುದು, ವರಿಷ್ಠರು ಹೆಸರು ಬದಲಾಯಿಸಿದರೆ ಸರಿ, ಇಲ್ಲದಿದ್ದರೆ ತನ್ನ ದಾರಿ ತನಗೆ ಎನ್ನುವ ವೀಣಾ ತನ್ನ ಪತಿ ಮತ್ತು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಹೊರಗಿಟ್ಟು ತಾನು ಸ್ಫರ್ಧಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಪಕ್ಷಕ್ಕೆ ರುಂಡ ಕೊಡ್ತೀನಿ, ವೈಯಕ್ತಿಕ ಬಂದರೆ ಯಾವ ಮಗನಿಗೂ ಬಗ್ಗೋದಿಲ್ಲ: ವಿಜಯಾನಂದ ಕಾಶಪ್ಪನವರ್