ವಿಜಯಪುರ: ರೈತರ ಜೊತೆ ಸೇರಿ ಹಂತಿ ಪದ ಹಾಡಿ ಕಾಮದಹನ ಮಾಡಿದ ಮಾಜಿ ಸಚಿವ ಬೆಳ್ಳುಬ್ಬಿ
ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದಲ್ಲಿ ನಡೆದ ಹೋಳಿ ಹಬ್ಬದ ಸಂಭ್ರಮದಲ್ಲಿ ಮಾಜಿ ಸಚಿವ ಬೆಳ್ಳುಬ್ಬಿ ಭಾಗವಹಿಸಿ ಸಂಭ್ರಮಿಸಿದರು. ಈ ವೇಳೆ ರೈತರ ಜೊತೆ ಸೇರಿ ಸಾಂಪ್ರದಾಯಿಕ ಜಾನಪದ ಕಲೆಯ ಹಂತಿ ಪದ ಹಾಡಿ ಕಾಮದಹನ ಮಾಡಿದರು. ಶ್ರೀ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ತಡರಾತ್ರಿ ಹೋಳಿ ಹಬ್ಬದ ಕಾಮದಹನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಜಯಪುರ, ಮಾರ್ಚ್.25: ವಿಜಯಪುರದಲ್ಲಿ ಹೋಳಿ (Holi) ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗಿದೆ. ಹೋಳಿ ಹಬ್ಬ ಆಚರಣೆ ಹಿನ್ನೆಲೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ (Bellubbi) ಅವರು ಗ್ರಾಮಸ್ಥರೊಂದಿಗೆ ಬೆರೆತು ಹಂತಿ ಪದ ಹಾಡಿ ಕಾಮದಹನ ಮಾಡಿದ್ದಾರೆ. ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪಟ್ಟಣದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ತಡರಾತ್ರಿ ಹೋಳಿ ಹಬ್ಬದ ಕಾಮದಹನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಮದಹನಕ್ಕೆ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಆಗಮಿಸಿ ರೈತರ ಜೊತೆ ಸೇರಿ ಸಾಂಪ್ರದಾಯಿಕ ಜಾನಪದ ಕಲೆಯ ಹಂತಿ ಪದ ಹಾಡಿದರು. ಸಂಗಡಿಗರೊಂದಿಗೆ ಸೇರಿ ಹಂತಿ ಪದ ಹಾಡಿ ರಂಜಿಸಿದ ಮಾಜಿ ಸಚಿವ ಬೆಳ್ಳುಬ್ಬಿ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos