TV9 ಇಂಪ್ಯಾಕ್ಟ್: ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಚಳ್ಳಾಳ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟಕ್ಕೆ ಅಕ್ಕಿ ಪೂರೈಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯ ಮತ್ತು ಅಕ್ಷರದಾಸೋಹ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಫ್.ಸಿ.ಬಾಳಿಕಾಯಿ ಹಾಗೂ ಅಕ್ಷರದಾಸೋಹ ಅಧಿಕಾರಿ ಟಿ.ಎಸ್.ಮಳವಳ್ಳಿಯನ್ನ ಅಮಾನತುಗೊಳಿಸಿ ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ದಲ್ಜತಕುಮಾರ್ ಆದೇಶ ಹೊರಡಿಸಿದ್ದಾರೆ.
ಹಾವೇರಿ, (ನವೆಂಬರ್ 22): ಚಳ್ಳಾಳ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟಕ್ಕೆ ಅಕ್ಕಿ ಪೂರೈಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯ ಮತ್ತು ಅಕ್ಷರದಾಸೋಹ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಫ್.ಸಿ.ಬಾಳಿಕಾಯಿ ಹಾಗೂ ಅಕ್ಷರದಾಸೋಹ ಅಧಿಕಾರಿ ಟಿ.ಎಸ್.ಮಳವಳ್ಳಿಯನ್ನ ಅಮಾನತುಗೊಳಿಸಿ ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ದಲ್ಜತಕುಮಾರ್ ಆದೇಶ ಹೊರಡಿಸಿದ್ದಾರೆ.
ಸವಣೂರು ತಾಲೂಕಿನ ಚಳ್ಳಾಳ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ 15 ದಿನ ಅಕ್ಕಿ ಪೂರೈಕೆಯಾಗಿಲ್ಲ. ಹೀಗಾಗಿ ಬಿಸಿಯೂಟ ಮಾಡಿರಲಿಲ್ಲ. ಹೀಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಸ್ಥರು ಬಿಸಿಯೂಟ ಅಕ್ಕಿ ವ್ಯವಸ್ಥೆ ಮಾಡಿದ್ದರು. ಇದರಿಂದ ಕರ್ತವ್ಯ ನಿರ್ವಹಣೆ ನಿರ್ಲಕ್ಷ್ಯ ಹಿನ್ನೆಲೆ ಬಿಇಒ ನೋಟಿಸ್ ನೀಡಿದ್ದರು. ಆದ್ರೆ, ನೋಟಿಸ್‌ಗೆ ಇಬ್ಬರು ಅಧಿಕಾರಿಗಳು ನೀಡಿರುವ ಸಮಜಾಯಿಷಿ ಸರಿಯಿಲ್ಲ. 15 ದಿನ ಅಕ್ಕಿ ಇಲ್ಲದಿದ್ದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಪಿಎಂ ಪೋಷಣ್ ಶಕ್ತಿ ಯೋಜನೆ ಜಾರಿಯಲ್ಲಿ ಕರ್ತವ್ಯಲೋಪ ಹಿನ್ನೆಲೆ ಮುಖ್ಯೋಪಾಧ್ಯಾಯ ಮತ್ತು ಅಕ್ಷರದಾಸೋಹ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
