ಹಾವೇರಿ, ನ.23: ಕಾರು ವಾಪಸ್ ನೀಡಲು ಹಾವೇರಿ ಜಿಲ್ಲೆಯ ಶಿಗ್ಗಾಂವಿ(Shiggaavi) ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಮೇಶ ಭಜಂತ್ರಿ ಅವರು 15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹಾವೇರಿ(Haveri) ಎಸ್ಪಿ ಅಂಶುಕುಮಾರ ಅವರು ಕಾನ್ಸ್ಟೇಬಲ್ನ್ನು(Constable) ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಕಾರು ಚಾಲಕನ ವಾಹನದ ಎಲ್ಲಾ ದಾಖಲೆಗಳು ಸರಿ ಇದ್ದರೂ ಲಂಚಕ್ಕೆ ಬೇಡಿಕೆ ಇಟ್ಟದ್ದರು. 3 ಸಾವಿರ ರುಪಾಯಿ ತೆಗೆದುಕೊಂಡು ಗಾಡಿ ಬಿಡಿ ಸರ್ ಎಂದಿದ್ದ ಚಾಲಕನ ಮಾತಿಗೆ, ಅಷ್ಟೇಲ್ಲ ಆಗಲ್ಲ, 15 ಸಾವಿರ ಕೊಟ್ಟು ಸಾಹೇಬರ ಹೇಳಿ ಹಾಗೆ ಗಾಡಿ ತೆಗೆದುಕೊಂಡು ಹೋಗು ಎಂದು ಲಂಚಕ್ಕೆ ಬೇಡಿಕೆಯಿಟ್ಟ ವಿಡಿಯೋವನ್ನು ಚಾಲಕ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದ. ಈ ಹಿನ್ನಲೆ ಎಸ್ಪಿ ಅವರು ವಿಡಿಯೋ ಮತ್ತು ಪ್ರಕರಣದ ಕುರಿತು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ