ಚಿಕ್ಕಮಗಳೂರು: ಸಹೋದ್ಯೋಗಿಗಳ ವಿರುದ್ಧ ಪಿತೂರಿ ಆರೋಪ ಕಾನ್ಸ್‌ಟೇಬಲ್ ಅಮಾನತು
ಸಹೋದ್ಯೋಗಿಗಳ ವಿರುದ್ಧ ಪಿತೂರಿ ನಡೆಸಿದ ಆರೋಪದಡಿ ಮೂಡಿಗೆರೆ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಮಂಜುನಾಥ್ನನ್ನ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅವರು ಅಮಾನತು ಮಾಡಿದ್ದಾರೆ.
ಚಿಕ್ಕಮಗಳೂರು: ಸಹೋದ್ಯೋಗಿಗಳ ವಿರುದ್ಧ ಪಿತೂರಿ ಆರೋಪ ಕಾನ್ಸ್‌ಟೇಬಲ್ ಮಂಜುನಾಥ್ನನ್ನ ಅಮಾನತು ಮಾಡಿದ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್. ಕಳ್ಳತನದ ಆರೋಪದ ಹಿನ್ನೆಲೆ ಆಟೋ ಚಾಲಕನೊಬ್ಬನ ಮೇಲೆ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಹಿತ್ ಹಾಗೂ ವಸಂತ್ ಎಂಬುವವರು ಹಲ್ಲೆ ಮಾಡಿದ್ದರು. ಈ ಕುರಿತು ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಇಬ್ಬರು ಪೇದೆಗಳನ್ನ ಅಮಾನತು ಮಾಡಿದ್ದರು. ಇದೀಗ ಅಮಾನತು ಆಗಿದ್ದ ಇಬ್ಬರು ಕಾನ್ಸ್‌ಟೇಬಲ್ ವಿರುದ್ಧ ದೂರು ನೀಡಿ, ಹಣ ಪಡೆಯುವಂತೆ ಸಾರ್ವಜನಿಕರ ಮೇಲೆ ಒತ್ತಡ ಹಾಕಿದ್ದ ಕಾನ್ಸ್‌ಟೇಬಲ್ ಮಂಜುನಾಥ್ನನ್ನ ಅಮಾನತು ಮಾಡಲಾಗಿದೆ.
ಪ್ರೀತಿಸಿ ಅವೈಡ್ ಮಾಡಿದ ಪ್ರಿಯತಮೆ; ಮನಸೋ ಇಚ್ಛೆ ಇರಿದು ಯುವತಿಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ!
ಬೆಂಗಳೂರು: ತನ್ನನ್ನು ಆವೈಡ್ ಮಾಡಿದಳೆಂದು ಆಕ್ರೋಶಗೊಂಡ ಯುವಕನೊಬ್ಬ ತನ್ನ ಪ್ರಿಯತಮೆಯನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಜೀವನ್ ಭಿಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ಇಂದು ಸಂಜೆ (ಫೆಬ್ರವರಿ 28) ನಡೆದಿದೆ. ಆಂಧ್ರಪ್ರದೇಶ ಮೂಲದ ಲೀಲಾಪವಿತ್ರಾ (28) ಕೊಲೆಯಾದ ಯುವತಿಯಾಗಿದ್ದಾಳೆ. ದಿವಾಕರ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಈತನೂ ಆಂಧ್ರಪ್ರದೇಶ ಮೂಲದವನಾಗಿದ್ದಾನೆ. ಪ್ರಕರಣ ಸಂಬಂಧ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಿವಾಕರ್ನನ್ನು ಅರೆಸ್ಟ್ ಮಾಡಿದ್ದಾರೆ.
ಲೀಲಾಪವಿತ್ರಾ ಮತ್ತು ದಿವಾಕರ ಎಂಬವರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಆಕೆ ದಿವಾಕರನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾಳೆ. ಎಷ್ಟೇ ಯತ್ನಿಸಿದರೂ ಆಕೆಯನ್ನು ತನ್ನ ದಾರಿಗೆ ತರಲಾಗದೆ ಕೋಪಗೊಂಡ ದಿವಾಕರ, ಆಕೆಯನ್ನು ಹತ್ಯೆ ಮಾಡುವ ಚಿಂತನೆ ನಡೆಸಿದ್ದಾನೆ. ಅದರಂತೆ ಇಂದು ಸಂಜೆ 7 ಗಂಟೆ ಸುಮಾರಿಗೆ ವಿಂಡ್ ಟನಲ್ ರಸ್ತೆಯಲ್ಲಿರುವ ಕಚೇರಿಯಿಂದ ಕೆಲಸ ಮುಗಿಸಿ ಹೊರ ಬಂದಾಗ ಯುವತಿಯ ಮೇಲೆ ದಾಳಿ ನಡೆಸಿದ ದಿವಾಕರ, ಚಾಕುವಿನಿಂದ 16ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಪರಿಣಾಮವಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 am, Wed, 1 March 23