ಲೋಕಾಯುಕ್ತ ದಾಳಿ ವೇಳೆ ಕಿಟಿಕಿಯಿಂದ ಲಕ್ಷ ಲಕ್ಷ ಹಣ ಎಸೆದರು! ವಿಡಿಯೋ ನೋಡಿ

ಲೋಕಾಯುಕ್ತ ದಾಳಿ ವೇಳೆ ಕಿಟಿಕಿಯಿಂದ ಲಕ್ಷ ಲಕ್ಷ ಹಣ ಎಸೆದರು! ವಿಡಿಯೋ ನೋಡಿ

Ganapathi Sharma
|

Updated on: Nov 12, 2024 | 12:40 PM

ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಭ್ರಷ್ಟರ ಬೇಟೆ ನಡೆಸಿದ್ದಾರೆ. ಹಾವೇರಿಯ ಬಸವೇಶ್ವರ ನಗರದಲ್ಲಿ ಸರ್ಕಾರಿ ನೌಕರರೊಬ್ಬರ ಮನೆ ಮೇಲೆ ದಾಳಿ ನಡೆದಾಗ ಅವರು ಲಕ್ಷ ಲಕ್ಷ ರೂಪಾಯಿ ಹಣವನ್ನು ಕಿಟಿಕಿಯಿಂದ ಹೊರಗೆ ಎಸೆದಿರುವುದು ಗೊತ್ತಾಗಿದೆ. ಸುಮಾರು 9 ಲಕ್ಷ ರೂ. ನಗದನ್ನು ಅವರು ಕಿಟಿಕಿಯಿಂದ ಬಿಸಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಹಾವೇರಿ, ನವೆಂಬರ್ 12: ಹಾವೇರಿಯಲ್ಲಿ ಕೂಡ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ನಿವಾಸಗಳಿಂದ ಹಣ, ಚಿನ್ನ, ದಾಖಲೆಗಳನ್ನು ವಶಪಡಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ, ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಹಾವೇರಿಯ ಬಸವೇಶ್ವರ ನಗರದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಉ‌ಪ‌ವಿಭಾಗದ ಎಇ ಕಾಶೀನಾಥ್ ಭಜಂತ್ರಿ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 14 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಬೆಳಗ್ಗೆ ಮನೆಯಲ್ಲಿ ಮಲಗಿದ್ದ ಭಜಂತ್ರಿ, ಲೋಕಾಯುಕ್ತ ಅಧಿಕಾರಿಗಳ ದಾಳಿ ಸುಳಿವು ಸಿಗುತ್ತಿದ್ದಂತೆಯೇ ಸುಮಾರು 9 ಲಕ್ಷ ರೂ. ಹಣದ ಗಂಟನ್ನು ಕಿಟಿಕಿಯಿಂದ ಆಚೆ ಎಸೆದಿದ್ದಾರೆ. ಆದರೆ, ತಕ್ಷಣ ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಅದನ್ನೂ ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ