ಮದುವೆಯಾಗಿ ಮಕ್ಕಳಿರುವ ವಿಷಯ ಮುಚ್ಚಿಟ್ಟು ಮತ್ತೊಂದು ವಿವಾಹ: ಮಹಿಳೆಯ ಸ್ಫೋಟಕ ಹೇಳಿಕೆ

Updated on: Feb 11, 2026 | 1:07 PM

ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮದುವೆ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ರವಿಚಂದ್ರ ಎಂಬುವವರಿಗೆ ರೇಖಾ ಎಂಬ ಮಹಿಳೆ ತನಗೆ ಇಬ್ಬರು ಮಕ್ಕಳಿದ್ದರೂ ಮದುವೆಯಾಗಿ 2.5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪವಿದೆ. ಆದರೆ, ಆರೋಪ ನಿರಾಖರಿಸಿರುವ ರೇಖಾ, ಬ್ರೋಕರ್​ಗೆ ತನ್ನ ಹಿಂದಿನ ಮದುವೆಯ ಬಗ್ಗೆ ತಿಳಿಸಿದ್ದಾಗಿ ಮತ್ತು ಹಣ ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾವೇರಿ, ಫೆಬ್ರವರಿ 11: ರಾಣೆಬೆನ್ನೂರಿನಲ್ಲಿ ಮದುವೆ ವಂಚನೆಯ ಪ್ರಕರಣವೊಂದು ವರದಿಯಾಗಿದೆ. ತುಮ್ಕಿನಕಟ್ಟಿ ಗ್ರಾಮದ ರವಿಚಂದ್ರ ಎಂಬುವವರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ರೇಖಾ ಎಂಬ ಮಹಿಳೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರೇಖಾ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೂ ರವಿಚಂದ್ರ ಅವರನ್ನು ಮದುವೆಯಾಗಿ 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ರೇಖಾ ಅವರ ಮಕ್ಕಳು ಕರೆ ಮಾಡಿದಾಗ ಈ ಕೃತ್ಯ ಬಯಲಾಗಿದೆ. ನ್ಯಾಯಕ್ಕಾಗಿ ರವಿಚಂದ್ರ ಅವರು ಹಲಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ರೇಖಾ, ತಮಗೆ ಹಣದ ವಿಷಯ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2.5 ರಿಂದ 3 ಲಕ್ಷ ರೂಪಾಯಿ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿರುವ ಅವರು, ಹಣವನ್ನು ಯಾರು ತೆಗೆದುಕೊಂಡಿದ್ದಾರೆ ಎಂದು ಬ್ರೋಕರ್​ಗಳನ್ನು ಕೇಳುವಂತೆ ಹೇಳಿದ್ದಾರೆ. ಅಲ್ಲದೆ ಬ್ರೋಕರ್​ಗೆ ತಾನು ಹಿಂದೆಯೇ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 11, 2026 01:06 PM
Follow Us
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More