ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಎಸ್ಐಟಿ ಕಾರ್ಯವೈಖರಿ ಸಂದೇಹಿಸುವುದು ತರವಲ್ಲ: ಪರಮೇಶ್ವರ್
ಎಸ್ಐಟಿ ಗೃಹಖಾತೆಯ ಒಂದು ಕಾನೂನಾತ್ಮಕ ಅಂಗ, ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ಅವರಿಗೆ ಎಲ್ಲ ಗೊತ್ತಿದೆ, ಅದು ಮಾಡುತ್ತಿರುವ ತನಿಖೆ ಮುಗಿದು ವರದಿ ಸರ್ಕಾರಕ್ಕೆ ಸಿಕ್ಕ ಬಳಿಕ ಅದು ಸಾರ್ವಜನಿಕ ವಲಯಕ್ಕೂ ಲಭ್ಯವಾಗುತ್ತದೆ. ಆಗ ಟೀಕೆ-ಟಿಪ್ಪಣಿ, ವಿಶ್ಲೇಷಣೆ ಮಾಡಲಿ, ಯಾರೂ ಬೇಡ ಅನ್ನುತ್ತಾರೆ? ಎಂದು ಪರಮೇಶ್ವರ್ ಹೇಳಿದರು
ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾತನಾಡುವ ಭಾಷೆ ಮತ್ತು ಶೈಲಿಯಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಿ. ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಕುಮಾರಸ್ವಾಮಿಯವರ ಪದಬಳಕೆ ಹೇಗಿತ್ತು ಅಂತ ನೀವು ಕೇಳಿದ್ದೀರಿ. ಆದರೆ, ಪರಮೇಶ್ವರ ತಾನು ಹೇಳಬೇಕಾಗಿರುವುದನ್ನು ಸಭ್ಯ ಮತ್ತು ಸುಂಸ್ಕೃತ ಭಾಷೆಯಲ್ಲಿ ಸರಿಯಾಗಿ ಎದುರಿನವರಿಗೆ ತಾಕುವಂತೆ ಹೇಳುತ್ತಾರೆ. ಎಸ್ಐಟಿ ಕಾರ್ಯ ವೈಖರಿ (SIT work pattern) ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಸರ್ಕಾರದ ಮೇಲೆ ಜವಾಬ್ದಾರಿಗಳಿರುತ್ತವೆ, ಸರ್ಕಾರ, ಬಗ್ಗೆ ಅದರ ಸಂಸ್ಥೆ ಮತ್ತು ನಮ್ಮ ವ್ಯವಸ್ಥೆಯ ಬಗ್ಗೆ ಹಗುರವಾಗಿ ಮಾತಾಡುವುದು ಅವುಗಳ ಮೇಲೆ ಅನುಮಾನ ಪಡೋದು ಸರಿಯಲ್ಲ. ಎಸ್ಐಟಿ ಗೃಹಖಾತೆಯ ಒಂದು ಕಾನೂನಾತ್ಮಕ ಅಂಗ, ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ಅವರಿಗೆ ಎಲ್ಲ ಗೊತ್ತಿದೆ, ಅದು ಮಾಡುತ್ತಿರುವ ತನಿಖೆ ಮುಗಿದು ವರದಿ ಸರ್ಕಾರಕ್ಕೆ ಸಿಕ್ಕ ಬಳಿಕ ಅದು ಸಾರ್ವಜನಿಕ ವಲಯಕ್ಕೂ ಲಭ್ಯವಾಗುತ್ತದೆ. ಆಗ ಟೀಕೆ-ಟಿಪ್ಪಣಿ, ವಿಶ್ಲೇಷಣೆ ಮಾಡಲಿ, ಯಾರೂ ಬೇಡ ಅನ್ನುತ್ತಾರೆ? ನಮಗೂ ಸಿಬಿಐ ಮೇಲೆ ಅಪನಂಬಿಕೆ ಇದೆ, ಕುಮಾರಸ್ವಾಮಿ ಅದಕ್ಕೇನು ಹೇಳುತ್ತಾರೆ ಎಂದು ಪರಮೇಶ್ವರ್ ಕೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಹಾಜರಾಗದಿದ್ದರೆ ಎಸ್ಐಟಿ ಅಧಿಕಾರಿಗಳು ಅವರಿದ್ದಲ್ಲಿಗೆ ಹೋಗಿ ಅರೆಸ್ಟ್ ಮಾಡುತ್ತಾರೆ: ಜಿ ಪರಮೇಶ್ವರ್