ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು

Edited By:

Updated on: Aug 20, 2026 | 5:39 PM

ಮಲ್ಲಿನಾಥ ಮಹಾರಾಜರು ಕಲಬುರಗಿ ಜಿಲ್ಲೆಯ ನಿರುಗುಡಿ ಗ್ರಾಮದ ಮೌನಿ ಸಂತರು. ಸಮಾಜ ಸೇವೆ, ರಾಷ್ಟ್ರಭಕ್ತಿ ಮತ್ತು ಆಧ್ಯಾತ್ಮಿಕತೆಗೆ ಹೆಸರಾದ ಇವರು, ಮಾತನಾಡುವುದಿಲ್ಲ. ಹಸಿವಿನವರಿಗೆ ಅನ್ನದಾಸೋಹ, ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಾ, 5,000ಕ್ಕೂ ಹೆಚ್ಚು ಮಠಗಳನ್ನು ಸ್ಥಾಪಿಸಿದ್ದಾರೆ. ಭಕ್ತರ ಕಷ್ಟಗಳನ್ನು ಮೌನವಾಗಿಯೇ ಅರ್ಥಮಾಡಿಕೊಂಡು ಪರಿಹಾರ ಒದಗಿಸುವ ಇವರನ್ನು ಭಕ್ತರು ನಡೆದಾಡೋ ದೇವರು ಎಂದು ಪೂಜಿಸುತ್ತಾರೆ.

ಬೀದರ್​, ಆಗಸ್ಟ್​ 20: ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿರುಗುಡಿ ಗ್ರಾಮದ ಮಲ್ಲಿನಾಥ ಮಹಾರಾಜರು ಯಾವುದೇ ಭಾಷಣ ಮಾಡದೆ, ಸದಾ ಮೌನವಾಗಿಯೇ ಇದ್ದುಕೊಂಡು ನಿಸ್ವಾರ್ಥ ಸಮಾಜ ಸೇವೆ, ಆಧ್ಯಾತ್ಮಿಕ ಜಾಗೃತಿ ಹಾಗೂ ಅನ್ನದಾಸೋಹದ ಮೂಲಕ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ನೀಗಿಸುತ್ತಾ ನಡೆದಾಡುವ ದೇವರಂತೆ ಮನೆಮಾತಾಗಿದ್ದಾರೆ. ಬೀದರ್ ಜಿಲ್ಲೆ ಮಾತ್ರವಲ್ಲದೆ, ಮಹಾರಾಷ್ಟ್ರ ಮತ್ತು ದೇಶದ ವಿವಿಧ ಭಾಗಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದಾರೆ. ದೇಶಾದ್ಯಂತ ಐದು ಸಾವಿರಕ್ಕೂ ಹೆಚ್ಚು ಮಠಗಳನ್ನು ಸ್ಥಾಪಿಸಿರುವ ಇವರು, ಯುವಜನರಲ್ಲಿ ದೇಶಭಕ್ತಿಯನ್ನು ಬಿತ್ತುವುದರ ಜೊತೆಗೆ ಸ್ವಾತಂತ್ರ್ಯೋತ್ಸವದ ಸಂದರ್ಭಗಳಲ್ಲಿ ಯೋಧರನ್ನು ಗೌರವಿಸುತ್ತಾ, ಜಾತಿ-ಧರ್ಮದ ಹಂಗಿಲ್ಲದೆ ತಮ್ಮ ಬಳಿ ಬರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಾ ಹಾಗೂ ಋತುಮಾನಕ್ಕೆ ತಕ್ಕಂತೆ ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಲಕ್ಷಾಂತರ ಜನರ ಆಶಾಕಿರಣವಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us