Assembly Polls: ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹೆಚ್ ಡಿ ಬ್ರದರ್ಸ್ ಈಗಾಗಲೇ ಇತ್ಯರ್ಥ ಮಾಡಿದ್ದಾರೆಯೇ?

ಅರುಣ್​ ಕುಮಾರ್​ ಬೆಳ್ಳಿ

Updated on: Mar 13, 2023 | 7:07 PM

ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಅಂತ ರೇವಣ್ಣ ಕುಟುಂಬ ಆಗ್ರಹಿಸುತ್ತಿದೆ. ಆದರೆ ಕುಮಾರಣ್ಣ ಮಾತ್ರ ಕಾರ್ಯಕರ್ತನಿಗೆ ಟಿಕೆಟ್ ಸಿಗುತ್ತದೆ ಅಂತ ಹೆಳುತ್ತಾರೆಯೇ ಹೊರತು ಕಾರ್ಯಕರ್ತನ ಹೆಸರು ಹೇಳೋದಿಲ್ಲ! ಭವಾನಿ ಕೂಡ ಪಕ್ಷದ ಕಾರ್ಯಕರ್ತೆ ತಾನೆ?

ಹಾಸನ: ಜೆಡಿಎಸ್ ಹೆಚ್ ಡಿ ಬ್ರದರ್ಸ್ ಅರ್ಥಮಾಡಿಕೊಳ್ಳುವುದು ಕಾರ್ಯಕರ್ತರಿಗೂ ಕಷ್ವವಾಗಿರಬಹುದು ಮಾರಾಯ್ರೇ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಹೆಚ್ ಡಿ ರೇವಣ್ಣ (HD Revanna) ಇಬ್ಬರನ್ನೂ ಒಂದೇ ವೇದಿಕೆಯ ಮೇಲೆ ಕಾಣಿಸಿದಾಗೆಲ್ಲ, ಅತ್ಯಂತ ಆತ್ಮೀಯತೆಯಿಂದ, ಪ್ರೀತಿಯಿಂದ, ಗಹನವಾದ ಚರ್ಚೆಯಲ್ಲಿ ಮುಳುಗಿರುತ್ತಾರೆ. ಅಂದರೆ, ಹಾಸನ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಅನ್ನುವ ಬಗ್ಗೆ ಅವರಿಬ್ಬರಲ್ಲಿ ಭಿನ್ನಾಭಿಪ್ರಾಯವಿಲ್ಲ ಅನ್ನೋದು ವೇದ್ಯವಾಗುತ್ತದೆ. ಆದರೆ, ರೇವಣ್ಣ ಒಂಡೆಡೆ, ಕಮಾರಸ್ವಾಮಿ ಮತ್ತೊಂದೆಡೆ ಪ್ರವಾಸ, ಪ್ರಚಾರ ಮಾಡುತ್ತಿದ್ದರೆ ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡುತ್ತಾರೆ. ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ನೀಡಬೇಕು ಅಂತ ರೇವಣ್ಣ ಕುಟುಂಬ ಆಗ್ರಹಿಸುತ್ತಿದೆ. ಆದರೆ ಕುಮಾರಣ್ಣ ಮಾತ್ರ ಕಾರ್ಯಕರ್ತನಿಗೆ ಟಿಕೆಟ್ ಸಿಗುತ್ತದೆ ಅಂತ ಹೆಳುತ್ತಾರೆಯೇ ಹೊರತು ಕಾರ್ಯಕರ್ತನ ಹೆಸರು ಹೇಳೋದಿಲ್ಲ! ಭವಾನಿ ಕೂಡ ಪಕ್ಷದ ಕಾರ್ಯಕರ್ತೆ ತಾನೆ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.