ಲೋಕಾಯುಕ್ತ ವರದಿಯಲ್ಲಿ ತನ್ನ ವಿರುದ್ಧ ಅವ್ಯವಹಾರದ ಪ್ರಸ್ತಾಪ ಅಗಿರುವುದನ್ನು ಅಂಗೀಕರಿಸಿದ ಕುಮಾರಸ್ವಾಮಿ
ತಾವು ವಿರೋಧ ಪಕ್ಷದಲ್ಲಿದ್ದಾಗ ಅಧಿಕಾರದಲ್ಲಿದ್ದ ಬೇರೆ ಬೇರೆ ಸರ್ಕಾರಗಳ ವಿರುದ್ಧ ದಾಖಲೆಗಳ ಸಮೇತ ಹಲವಾರು ಅಕ್ರಮ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದನ್ನು ಕುಮಾರಸ್ವಾಮಿ ನೆನಪಿಸಿಕೊಂಡರು. ಅಂದರೆ 2009 ರಿಂದ 2013 ರವರೆಗೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರದ ವಿರುದ್ಧವೂ ಅವರು ಆರೋಪಗಳನ್ನು ಮಾಡಿದ್ದರು!
ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡುವುನ್ನು ನಿರೀಕ್ಷಿಸಲಾಗಿತ್ತು. ಅವರ ವಿರುದ್ಧ ಗಣಿಗಾರಿಕೆ ಲೀಸಿಂಗ್ ನಲ್ಲಿ ನಡೆದ ಅಕ್ರಮದ ಆರೋಪವನ್ನು ಲೋಕಾಯುಕ್ತ ಎಸ್ಐಟಿ ತನಿಖೆ ನಡೆಸಿ ಸಲ್ಲಿಸಿದ್ದ ಚಾರ್ಜ್ಶೀಟ್ ಆಧಾರದ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಮ್ಮ ವರ್ಷನ್ ಜನತೆಯ ಮುಂದಿಡುವುದು ಅನಿವಾರ್ಯವಾಗಿತ್ತು. ಜಂತಕಲ್ ಮತ್ತು ಸಾಯಿ ವೆಂಕಟೇಶ್ವರ ಮೈನಿಂಗ್ ಪ್ರಕರಣಗಳಲ್ಲಿ ತನಗಿಂತ ಮೊದಲು ಮುಖ್ಯಮಂತ್ರಿಗಳಾಗಿದ್ದ ಎಸ್ ಎಂ ಕೃಷ್ಣ ಮತ್ತು ದಿವಂಗತ ಧರಂಸಿಂಗ್ ಅವರ ಹೆಸರುಗಳು ಸಹ ಪ್ರಸ್ತಾಪವಾಗಿವೆ ಎಂದು ಹೇಳಿದ ಅವರು ತನಿಖೆ ನಡೆಸಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಲ್ಲ ಎಂದು ಹೇಳಿದರು. ಲೋಕಾಯುಕ್ತ ಎಸ್ಐಟಿಯ ಚೀಫ್ ಆಗಿದ್ದ ಯುಬಿ ಸಿಂಗ್ ಅವರು ನೀಡಿರುವ ವರದಿಯಲ್ಲಿ, ಜಂತಕಲ್ ಮತ್ತು ಸಾಯಿ ವೆಂಕಟೇಶ್ವರ ಪ್ರಕರಣಗಳಲ್ಲಿ ಸ್ವಲ್ಪಮಟ್ಟಿನ ಅವ್ಯವಹಾರ ನಡೆದಿದ್ದು ಗೊತ್ತಾಗಿದೆ, ಆದರೆ ಎಸ್ಐಟಿ ಮುಖ್ಯಮಂತ್ರಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಶಿಫಾರಸ್ಸು ಮಾಡಲ್ಲ, ಅದು ಸರ್ಕಾರದ ವಿವೇಚನೆ ಬಿಟ್ಟಿದ್ದು ಅಂತ ಉಲ್ಲೇಖವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್ಪಿಜಿ ಸಿಲಿಂಡರ್ ತುಂಬಿದ ಟ್ರಕ್
