ಹಾಸನ ಅಭ್ಯರ್ಥಿಯ ಆಯ್ಕೆ ಪಕ್ಷದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಬಾರದು: ಹೆಚ್ ಡಿ ಕುಮಾರಸ್ವಾಮಿ

|

Updated on: Feb 24, 2023 | 6:12 PM

ಹಾಸನದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮ್ಮತಿಯ ಮೇರೆಗೆ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುವುದು ಎಂದು ಎಂದು ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗ: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಹಾಸನ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿ ಯಾರು ಎಂದು ಕೇಳಿದ ಪ್ರಶ್ನೆಗೆ ಪುನಃ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿದರು. ಭವಾನಿ ರೇವಣ್ಣ (Bhavani Revanna ) ಅವರು ಈಗಾಗಾಲೇ ಪ್ರಚಾರ ಕಾರ್ಯ ಅರಂಭಿಸಿರುವ ಬಗ್ಗೆ ಏನನ್ನೂ ಹೇಳದ ಕುಮಾರಸ್ವಾಮಿ, ಪಕ್ಷದ ವರಿಷ್ಠರೆಲ್ಲ ಕೂತು ಒಂದು ನಿರ್ಣಯ ತೆಗೆದುಕೊಳ್ಳುತ್ತೇವೆ, ಅಭ್ಯರ್ಥಿಯ ಆಯ್ಕೆ ಪಕ್ಷದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಬಾರದು, ಕಳೆದ ಎರಡೂವರೆ ತಿಂಗಳಿಂದ ತಾನು ಜೆಡಿಎಸ್ ಪಕ್ಷಕ್ಕೆ ಕನಿಷ್ಟ 125 ಸೀಟು ಬರುವಂತಾಗಲು ರಾಜ್ಯಾದಂತ ಓಡಾಡುತ್ತಿರಿವುದರಿಂದ ತನ್ನ ಶ್ರಮ ವ್ಯರ್ಥವಾಗಬಾರದು ಎಂದು ಹೇಳಿದರು. ಹಾಸನದ ಕಾರ್ಯಕರ್ತರನ್ನು (party workers) ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮ್ಮತಿಯ ಮೇರೆಗೆ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುವುದು ಎಂದು ಎಂದು ಕುಮಾರಸ್ವಾಮಿ ಹೇಳಿದರು. ಈ ವಾರದಲ್ಲಿ ಅಂತಿಮ ನಿರ್ಣಯ ಹೊರಬೀಳಲಿದೆ ಎಂದ ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ