ಜೋಡೆತ್ತುಗಳ ನಡುವೆ ಪುನಃ ಸಾಮರಸ್ಯ ಮೂಡಿದೆಯೇ? ಕುಮಾರಸ್ವಾಮಿ ಮಾತು ಕೇಳಿದರೆ ಹಾಗನ್ನಿಸದಿರದು!
ತಾನೊಬ್ಬ ಉದ್ಯಮಿ, ವ್ಯವಸಾಯಗಾರ ಮತ್ತು ರಾಜಕಾರಣಿ ಅಗಿರುವುದರಿಂದ ಭ್ರಷ್ಟಾಚಾರ ನಡೆಸುವ ಅವಶ್ಯಕತೆ ತನಗಿಲ್ಲ ಅಂತ ಖುದ್ದು ಶಿವಕುಮಾರ ಅವರೇ ಹೇಳಿರುವುದರಿಂದ ಈಡಿ ನೋಟಿಸ್ ಗೆ ಸಪರ್ಮಕವಾದ ಉತ್ತರ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದರು.
ಬೆಂಗಳೂರು: ವಿಧಾನ ಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಸಚಿವ ಎಸ್ ಟಿ ಸೊಮಶೇಖರ್ (ST Somashekhar) ಅವರ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್ ಆದೇಶ ನೀಡಿರುವುದರಿಂದ ತನಿಖೆ ಸರಾಗವಾಗಿ ನಡೆಯಲು ಸಚಿವರು ರಾಜೀನಾಮೆ ಸಲ್ಲಿಸಬೇಕೆಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ಡಿಕೆ ಶಿವಕುಮಾರ (DK Shivakumar) ಅವರು ತಾನೊಬ್ಬ ಉದ್ಯಮಿ, ವ್ಯವಸಾಯಗಾರ ಮತ್ತು ರಾಜಕಾರಣಿ ಅಗಿರುವುದರಿಂದ ಭ್ರಷ್ಟಾಚಾರ ನಡೆಸುವ ಅವಶ್ಯಕತೆ ತನಗಿಲ್ಲ ಅಂತ ಖುದ್ದು ಅವರೇ ಹೇಳಿರುವುದರಿಂದ ಈಡಿ ನೋಟಿಸ್ ಗೆ ಸಪರ್ಮಕವಾದ ಉತ್ತರ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದರು.