ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ, ನಿಷ್ಕಳಂಕಿತನಾಗಿ ಹೊರಬರುವೆ: ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ, ನಿಷ್ಕಳಂಕಿತನಾಗಿ ಹೊರಬರುವೆ: ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 19, 2022 | 11:46 AM

ಪ್ರಕರಣದ ನ್ಯಾಯಾಲಯದಲ್ಲಿದೆ, ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ, ನಿಷ್ಕಳಂಕಿತನಾಗಿ ಹೊರ ಬರುವ ವಿಶ್ವಾಸವೂ ಇದೆ ಎಂದು ಅವರು ಹೇಳಿದರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಸೋಮವಾರ ಸಕಲೇಶಪುರಕ್ಕೆ (Sakleshpura) ಹೊರಡುವಾಗ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡುತ್ತಾ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ (FIR) ಬಗ್ಗೆ ಪ್ರತಿಕ್ರಿಯೆ ನೀಡಿದರು. ಪ್ರಕರಣದ ನ್ಯಾಯಾಲಯದಲ್ಲಿದೆ, ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ, ನಿಷ್ಕಳಂಕಿತನಾಗಿ ಹೊರ ಬರುವ ವಿಶ್ವಾಸವೂ ಇದೆ ಎಂದು ಅವರು ಹೇಳಿದರು. ಶಿವಪ್ಪನವರ ಪತ್ನಿ ಅನಾರೋಗ್ಯದಿಂದ ಇರುವ ಕಾರಣ ಅವರ ಯೋಗಕ್ಷೇಮ ವಿಚಾರಿಸಲು ಸಕಲೇಶಪುರಕ್ಕೆ ಹೋಗಿ ಸಾಯಂಕಾಲದವರೆಗೆ ವಾಪಸ್ಸ ಬರುವುದಾಗಿ ಬಿ ಎಸ್ ವೈ ಹೇಳಿದರು.