ಹೊಲದಲ್ಲಿ ಬಾನುವಾರದ ಸ್ಪೆಷಲ್ ಬಾಡೂಟ ಸವಿದ ಕುಮಾರಸ್ವಾಮಿ

Edited By:

Updated on: Oct 20, 2024 | 6:16 PM

ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ಬಾನುವಾರದ ಬಾಡೂಟ ಸವಿದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಹೊಲದಲ್ಲಿ ರೈತ ಮಹಿಳೆಯರ ಜೊತೆ ಕುಳಿತು ನಾಟಿ ಕೋಳಿ ಸಾರು, ರಾಗಿ ಮುದ್ದೆ ಸವಿದರು.

ಮಂಡ್ಯ, (ಅಕ್ಟೋಬರ್ 20): ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ಭಾನುವಾರದ ಬಾಡೂಟ ಸವಿದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಹೊಲದಲ್ಲಿ ರೈತ ಮಹಿಳೆಯರ ಜೊತೆ ಕುಳಿತು ನಾಟಿ ಕೋಳಿ ಸಾರು, ರಾಗಿ ಮುದ್ದೆ ಸವಿದರು. ಕಳೆದ ಆಗಸ್ಟ್ 11ರಂದು ಲಕ್ಷ್ಮಣ ಎಂಬುವರ ಜಮೀನಿನಲ್ಲಿ ತಾವು ನಾಟಿ ಮಾಡಿದ್ದ ಭತ್ತವನ್ನು ವೀಕ್ಷಣೆ ಮಾಡಿದರು. ತಾವೇ ನಾಟಿ ಮಾಡಿದ್ದ ಭತ್ತದ ಗದ್ದೆ ವೀಕ್ಷಿಸಿದ ರೈತ ಮಹಿಳೆಯರ ಜೊತೆ ಕುಳಿತು ರಾಗಿ ಮುದ್ದೆ, ನಾಟಿ ಕೋಳಿ ಸೇವಿಸಿದರು. ಅಲ್ಲದೇ ನಾಟಿ ಕೋಳಿ ಸಾಂಬರ್ ರಚಿಯನ್ನೂ ಸಹ ಸವಿದರು.

Published on: Oct 20, 2024 06:03 PM
Loading...
Unable to load recommendations.
Follow Us
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More