ಗ್ಯಾರಂಟಿ ಯೋಜನೆ ನಿಲ್ಲುತ್ತವೆ ಅಂತ ಹೇಳಲು ಕುಮಾರಸ್ವಾಮಿಯೇನು ಮುಖ್ಯಮಂತ್ರಿಯೇ? ಭೈರತಿ ಸುರೇಶ್-ಸಚಿವ

|

Updated on: Apr 06, 2024 | 1:53 PM

ಜನರಿಗೆ ತಮ್ಮ ಸರ್ಕಾರದ ಮೇಲೆ ವಿಶ್ವಾಸವಿದೆ, ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ₹ 65,000 ಕೋಟಿಯನ್ನು ವಿವಿಧ ಗ್ಯಾರಂಟಿಗಳ ಯೋಜನೆಗಳ ಅಡಿಯಲ್ಲಿ ಜನರಿಗಾಗಿ ವಿನಿಯೋಗಿಸಿ ಒಂದು ಜನಪರ ಸರ್ಕಾರ ಅನಿಸಿಕೊಂಡಿದೆ, ಕೋಲಾರ ಕ್ಷೇತ್ರದ ಜನ ತಮ್ಮ ಅಭ್ಯರ್ಥಿ ಕೆವಿ ಗೌತಮ್ ಪರ ಮತ ಚಲಾಯಿಸಿ 2 ಲಕ್ಷಕ್ಕೂ ಹೆಚ್ಚು ವೋಟುಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಸುರೇಶ್ ಹೇಳಿದರು.

ಕೋಲಾರ: ಜಿಲ್ಲೆಯ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಜ್ಯ ಕಾಂಗ್ರೆಸ್ ವಿದ್ಯುಕ್ತವಾಗಿ ಚುನಾವಣಾ ಪ್ರಚಾರ ಶುರು ಮಾಡಿದೆ. ಈ ಸಂದರ್ಭದಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಕೋಲಾರ ಜಿಲ್ಲಾ ಮತ್ತು ಚುನಾವಣಾ ಉಸ್ತುವಾರಿ ಭೈರತಿ ಸುರೇಶ್ (Byrathi Suresh) ಕೋಲಾರ ಕ್ಷೇತ್ರದಲ್ಲಿ (KಒLar LS seat) ಕಾಂಗ್ರೆಸ್ ಪಕ್ಷಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಜನರಿಗೆ ತಮ್ಮ ಸರ್ಕಾರದ ಮೇಲೆ ವಿಶ್ವಾಸವಿದೆ, ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ₹ 65,000 ಕೋಟಿಯನ್ನು ವಿವಿಧ ಗ್ಯಾರಂಟಿಗಳ ಯೋಜನೆಗಳ ಅಡಿಯಲ್ಲಿ ಜನರಿಗಾಗಿ ವಿನಿಯೋಗಿಸಿ ಒಂದು ಜನಪರ ಸರ್ಕಾರ ಅನಿಸಿಕೊಂಡಿದೆ, ಕೋಲಾರ ಕ್ಷೇತ್ರದ ಜನ ತಮ್ಮ ಅಭ್ಯರ್ಥಿ ಕೆವಿ ಗೌತಮ್ (KV Gowtham) ಪರ ಮತ ಚಲಾಯಿಸಿ 2 ಲಕ್ಷಕ್ಕೂ ಹೆಚ್ಚು ವೋಟುಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸೋತರೆ, ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಅಂತ ಕುಮಾರಸ್ವಾಮಿ (HD Kumaraswamy) ಹೇಳಿರುವುದನನ್ನು ಅವರ ಗಮನಕ್ಕೆ ತಂದಾಗ ಅವರೇನು ಮುಖ್ಯಮಂತ್ರಿಯಾ? ತಮ್ಮ ಸರ್ಕಾರ ಮಂತ್ರಿ, ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಏನಾದರೂ ಹೇಳಿದ್ದಾರಾ? ತಮ್ಮದು ಬಹುಮತದ ಸರ್ಕಾರ, ಕುಮಾರಸ್ವಾಮಿ ಹೇಳಿದಂತೆ ಕೇಳುವ ಅವಶ್ಯಕತೆ ತಮಗಿಲ್ಲ, ಗ್ಯಾರಂಟಿ ಯೋಜೆನೆಗಳು ನಿಲ್ಲುವ ಸಂಭವವೇ ಇಲ್ಲ, ತಮ್ಮ ಸರ್ಕಾರದ ಮೇಲೆ ನಂಬಿಕೆಯಿಟ್ಟುಕೊಂಡಿರುವ ಜನ 20ಕ್ಕೂ ಲೋಕಸಭಾ ಸೀಟುಗಳನ್ನು ತಮ್ಮ ಪಕ್ಷಕ್ಕೆ ಗೆಲ್ಲಿಸಿ ಕೊಡಲಿದ್ದಾರೆ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:   ರಾಮನಗರಕ್ಕೆ ಡಿಕೆಶಿ ಕೊಡುಗೆ: ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ ಶಿವಕುಮಾರ್ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದರು!