ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆಯ ಬಾತ್ಮೀದಾರರೇ? ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

|

Updated on: Oct 14, 2023 | 7:42 PM

ಅದು ಶಿವಕುಮಾರ್ ಗೆ ಸೇರಿದ ಹಣ ಅಂತ ಹೇಳಲು ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆಯ ಬಾತ್ಮೀದಾರನೇನೂ ಅಲ್ಲ, ಆದರೆ ಕುಮಾರಸ್ವಾಮಿ ಮತ್ತ್ತು ಬಿಜೆಪಿ ನಾಯಕರು ಮಾತಾಡೋದು ಕೇಳುತ್ತಿದ್ದರೆ ಅವರು ಇಲಾಖೆಯ ಪ್ರತಿನಿಧಿಗಳಿರಬಹುದು ಎಂಬ ಅನುಮಾನ ಮೂಡುತ್ತದೆ. ಯಾಕೆಂದರೆ, ತನ್ನನ್ನು ಖಾಯಂ ಆಗಿ ತಿಹಾರ್ ಜೈಲಿನಲ್ಲಿ ಇಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂದು ಶಿವಕುಮಾರ್ ಹೇಳಿದರು

ಬೆಂಗಳೂರು: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಬಿಎಂಪಿ ಗುತ್ತಿಗೆದಾರ ಆರ್ ಅಂಬಿಕಾಪತಿ (R Ambikapathy) ಮನೆಯಲ್ಲಿ ದೊರೆತ ದಾಖಲೆರಹಿತ ಹಣ ಶಿವಕುಮಾರ್ ಗೆ ಸೇರಿದ್ದು ಅಂತ ಟ್ವೀಟ್ ಮಾಡುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar ) ಅವರಿಗೆ ಹೇಳಿದಾಗ, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಐಟಿ ಇಲಾಖೆ ಅಧಿಕಾರಿಗಳು ಸೀಜ್ ಆದ ಹಣದ ಮೂಲ ಯಾವುದು ಅಂತ ಅಧಿಕೃತ ಪ್ರಕಟನೆ ಹೊರಡಿಸಿದಾಗ ಅದು ಎಲ್ಲರಿಗೆ ಗೊತ್ತಾಗುತ್ತದೆ ಅಂತ ಹೇಳಿದರು. ಅದು ಶಿವಕುಮಾರ್ ಗೆ ಸೇರಿದ ಹಣ ಅಂತ ಹೇಳಲು ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆಯ ಬಾತ್ಮೀದಾರನೇನೂ ಅಲ್ಲ, ಆದರೆ ಕುಮಾರಸ್ವಾಮಿ ಮತ್ತ್ತು ಬಿಜೆಪಿ ನಾಯಕರು ಮಾತಾಡೋದು ಕೇಳುತ್ತಿದ್ದರೆ ಅವರು ಇಲಾಖೆಯ ಪ್ರತಿನಿಧಿಗಳಿರಬಹುದು ಎಂಬ ಅನುಮಾನ ಮೂಡುತ್ತದೆ. ಯಾಕೆಂದರೆ, ತನ್ನನ್ನು ಖಾಯಂ ಆಗಿ ತಿಹಾರ್ ಜೈಲಿನಲ್ಲಿ ಇಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂದು ಶಿವಕುಮಾರ್ ಹೇಳಿದರು. ಬಿಜೆಪಿ ಮತ್ತು ಕುಮಾರಸ್ವಾಮಿ ಪ್ರೇರಿತ ಐಟಿ ದಾಳಿಗಳು ರಾಜ್ಯದಲ್ಲಿ ಮುಂದುವರಿಯಲಿವೆಯೇ ಅಂತ ಕೇಳಿದಾಗ ಶಿವಕುಮಾರ್, ತನಗದು ಗೊತ್ತಿಲ್ಲ ಆದರೆ ಬಿಎಸ್ ಯಡಿಯೂರಪ್ಪನವರ ಕಾಲದಲ್ಲಿ ಏನು ನಡೆಯಿತು ಅಂತ ಗೊತ್ತಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on