ಐಟಿ ಅಧಿಕಾರಿಗಳು ಸೀಜ್ ಮಾಡಿರುವ ಹಣ ನಮ್ಮ ವ್ಯವಹಾರಕ್ಕೆ ಸಂಬಂಧಿಸಿದ್ದು, ಯಾವುದೇ ಪಕ್ಷದ್ದಲ್ಲ: ಪ್ರದೀಪ್, ಅಂಬಿಕಾಪತಿ ಪುತ್ರ

ಐಟಿ ಅಧಿಕಾರಿಗಳು ಸೀಜ್ ಮಾಡಿರುವ ಹಣ ನಮ್ಮ ವ್ಯವಹಾರಕ್ಕೆ ಸಂಬಂಧಿಸಿದ್ದು, ಯಾವುದೇ ಪಕ್ಷದ್ದಲ್ಲ: ಪ್ರದೀಪ್, ಅಂಬಿಕಾಪತಿ ಪುತ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 14, 2023 | 5:41 PM

ಅದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಹಣವಲ್ಲ, ಕಳೆದ ಒಂದೂವರೆ ದಶಕಗಳಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಬೇರೆ ವ್ಯವಹಾರಗಳು ಸಹ ಇವೆ, ಹಣ ನಮಗೆ ಸೇರಿದ್ದು ಮತ್ತು ಐಟಿ ಅಧಿಕಾರಿಗಳಿಗೆ ಸೂಕ್ತ ದಾಖಲಾತಿ ಒದಗಿಸಿ ಜಪ್ತಿ ಮಾಡಿಕೊಂಡಿರುವ ಹಣವನ್ನು ವಾಪಸ್ಸು ಪಡೆಯುತ್ತೇವೆ ಎಂದು ಪ್ರದೀಪ್ ಹೇಳಿದರು.

ಬೆಂಗಳೂರು: ನಿನ್ನೆ ಆದಾಯ ತೆರಿಗೆ ಇಲಾಖೆ ವೇಳೆ ಬಿಬಿಎಂಪಿ ಗುತ್ತಿಗೆದಾರ ಆರ್ ಅಂಬಿಕಾಪತಿ (R Ambikapathy) ಮನೆಯಲ್ಲಿ ಪತ್ತೆಯಾದ 42 ಕೋಟಿ ರೂ. ಯಾರದ್ದು, ಅವರಲ್ಲಿಗೆ ಹೇಗೆ ಬಂತು ಅಂತ ಭಾರೀ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು; ಕಾಂಗ್ರೆಸ್ ಪಕ್ಷ ಕಮೀಶನ್ ರೂಪದಲ್ಲಿ ಪಡೆದ ಹಣ ಅದು ಅಂತ ನೇರ ಆರೋಪಗಳನ್ನು ಮಾಡುತ್ತಿದ್ದಾರೆ. ಐಟಿ ಇಲಾಖೆಯ (IT department) ಪರಿಶೀಲನೆ ಬಳಿಕ ಅಂಬಿಕಾಪತಿ ಪುತ್ರ ಪ್ರದೀಪ್ (Pradeep) ಮಾಧ್ಯಮ ಪ್ರತಿನಿಧಿಗಳ ಜೊತೆ ಅವಸರದಲ್ಲಿ ಮಾತಾಡಿದರಾದರೂ ಯಾವುದನ್ನೂ ಸ್ಪಷ್ಟವಾಗಿ ಹೇಳಲಿಲ್ಲ. ಅದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಹಣವಲ್ಲ, ಕಳೆದ ಒಂದೂವರೆ ದಶಕಗಳಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಬೇರೆ ವ್ಯವಹಾರಗಳು ಸಹ ಇವೆ, ಹಣ ನಮಗೆ ಸೇರಿದ್ದು ಮತ್ತು ಐಟಿ ಅಧಿಕಾರಿಗಳಿಗೆ ಸೂಕ್ತ ದಾಖಲಾತಿ ಒದಗಿಸಿ ಜಪ್ತಿ ಮಾಡಿಕೊಂಡಿರುವ ಅಹಣವನನ್ನು ವಾಪಸ್ಸು ಪಡೆಯುತ್ತೇವೆ ಎಂದು ಹೇಳಿದರು. ಪ್ರದೀಪ್ ಧಾವಂತದಲ್ಲಿದ್ದರು, ಯಾವುದೇ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲಿಲ್ಲ ಅಥವಾ ಕೊಡುವ ಮನಸ್ಸು ಅವರಿಗಿರಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ