ದಾರಿಹೋಕರು ಆಡುವ ಮಾತಿಗೆ ಡಿಕೆ ಶಿವಕುಮಾರ್ರನ್ನು ಕಟಕಟೆಯಲ್ಲಿ ನಿಲ್ಲಿಸಲಾಗಲ್ಲ: ಡಿಕೆ ಸುರೇಶ್, ಸಂಸದ
ಕೆಲವರು ಬಾಯಿಗೆ ಬಂದಂತೆ ಆಡಿಕೊಳ್ಳುತ್ತಿದ್ದಾರೆ, ಅವರ ಮಾತಿಗೆ ಗಮನ ನೀಡುವ ಅಗತ್ಯವಿಲ್ಲ ಎಂದು ಸುರೇಶ್ ಹೇಳಿದರು. ಮಾತಾಡುತ್ತಿರವವರಿಗೆ ದುಡ್ಡು ಕಾಂಗ್ರೆಸ್ ಗೆ ಸೇರಿದ್ದು ಅಂತ ಐಟಿ ಅಧಿಕಾರಿಗಳು ಹೇಳಿದ್ದಾರೆಯೇ? ಹಣ ಯಾರದ್ದು ಅಂತ ಐಟಿ ದಾಳಿ ಮಾಡಿಸಿದ ಕೇಂದ್ರದ ಮಂತ್ರಿಗಳಿಗೆ ಗೊತ್ತಿರುತ್ತದೆ ಎಂದು ಸುರೇಶ್ ಹೇಳಿದರು.
ಬೆಂಗಳೂರು: ಪ್ರತಿ ವಿಷಯ ಚರ್ಚೆಗೆ ಬಂದಾಗಲೂ ಡಿಕೆ ಶಿವಕುಮಾರ್ (DK Shivakumar) ಹೆಸರು ಹೇಳಿದರೆ ಅವರೇನು ಮಾಡೋಕ್ಕಾಗುತ್ತದೆ, ಯಾರೋ ದಾರಿಹೋಕರು ಮಾತಾಡುತ್ತಾರೆ ಅನ್ನೋ ಕಾರಣಕ್ಕೆ ಶಿವಕುಮಾರ್ ಅವರನ್ನು ಟಾರ್ಗಟ್ ಮಾಡಿ ಕಟಕಟೆಯಲ್ಲಿ ನಿಲ್ಲಿಸಲಾಗಲ್ಲ ಎಂದು ನಿನ್ನೆ ಬಿಬಿಎಂಪಿ ಗುತ್ತಿಗೆದಾರ ಆರ್ ಅಂಬಿಕಾಪತಿ ಮನೆಯಲ್ಲಿ ರೂ. 42 ಕೋಟಿ ಸಿಕ್ಕ ವಿಷಯಕ್ಕೆ ಸಂಬಂಧಿಸಿದಂತೆ ರಾಮನಗರ ಸಂಸದ ಡಿಕೆ ಸುರೇಶ್ (DK Suresh) ಹೇಳಿದರು. ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಸುರೇಶ್, ಪಂಚರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ (Assembly polls) ನಡೆಯಲಿವೆ ಮತ್ತು ನಂತರ ಸಾರ್ವತ್ರಿಕ ಚುನಾವಣೆ (Lok Sabha polls) ಸಹ ನಡೆಯಲಿವೆ. ಆದರೆ, ಈ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ಹಣ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಸಂಬಂಧವಿಲ್ಲ, ಕೆಲವರು ಬಾಯಿಗೆ ಬಂದಂತೆ ಆಡಿಕೊಳ್ಳುತ್ತಿದ್ದಾರೆ, ಅವರ ಮಾತಿಗೆ ಗಮನ ನೀಡುವ ಅಗತ್ಯವಿಲ್ಲ ಎಂದು ಸುರೇಶ್ ಹೇಳಿದರು. ಮಾತಾಡುತ್ತಿರವವರಿಗೆ ದುಡ್ಡು ಕಾಂಗ್ರೆಸ್ ಗೆ ಸೇರಿದ್ದು ಅಂತ ಐಟಿ ಅಧಿಕಾರಿಗಳು ಹೇಳಿದ್ದಾರೆಯೇ? ಹಣ ಯಾರದ್ದು ಅಂತ ಐಟಿ ದಾಳಿ ಮಾಡಿಸಿದ ಕೇಂದ್ರದ ಮಂತ್ರಿಗಳಿಗೆ ಗೊತ್ತಿರುತ್ತದೆ ಎಂದು ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ