ಪಂಚರತ್ನ ಯಾತ್ರೆ ಸಮಯದಲ್ಲಿ ಮಗುವೊಂದಕ್ಕೆ ನಾಮಕರಣ ಮಾಡಿ ಉಡುಗೊರೆ ರೂಪದಲ್ಲಿ ಹಣ ನೀಡಿದ ಎಚ್ ಡಿ ಕುಮಾರಸ್ವಾಮಿ

ಮಗುವಿಗೆ ರಿಶಿಕ್ ಅಂತ ಹೆಸರಿಟ್ಟ ಕುಮಾರಸ್ವಾಮಿಯರು ಅವನ ಕೈಗೆ ಒಂದಷ್ಟು ನೋಟುಗಳನ್ನು ನೀಡಿದರು.

TV9kannada Web Team

| Edited By: Arun Belly

Nov 24, 2022 | 1:28 PM

ಚಿಕ್ಕಬಳ್ಳಾಪುರ:  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಜೆಡಿ(ಎಸ್) ಪಕ್ಷದ ಪಂಚರತ್ನ ಯಾತ್ರೆ (Pancharatna Yatre) ಜೋರಾಗಿ ಮುಂದುವರಿದಿದೆ. ಯಾತ್ರೆ ವೇಳೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ಅವರನ್ನು ಭೇಟಿಯಾಗಲು ಸುರೇಶ್-ರೂಪಾ ದಂಪತಿ (couple) ತಮ್ಮ ಪುಟ್ಟ ಕಂದನೊಂದಿಗೆ ಬಂದು ಮಗುವಿನ ನಾಮಕರಣ ಮಾಡಬೇಕೆಂದು ಕೋರಿದರು. ಮಗುವಿಗೆ ರಿಶಿಕ್ ಅಂತ ಹೆಸರಿಟ್ಟ ಕುಮಾರಸ್ವಾಮಿಯರು ಅವನ ಕೈಗೆ ಒಂದಷ್ಟು ನೋಟುಗಳನ್ನು ಉಡುಗೊರೆಯಾಗಿ ನೀಡಿದರು.
.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada