ಬಹಿರಂಗ ವೇದಿಕೆಯಲ್ಲಿ ಕಾಂಗ್ರೆಸ್ನವರ ವಿಡಿಯೋ ರಿಲೀಸ್ ಮಾಡಿದ ಕುಮಾರಸ್ವಾಮಿ
ಮುಡಾ ಹಗರಣ ಖಂಡಿಸಿ ಮೈಸೂರು ಚಲೋ ಕಾರ್ಯಕ್ರಮಕ್ಕೆ ಎರಡು ಪಕ್ಷಗಳಾದ ಬಿಜೆಪಿ-ಜೆಡಿಎಸ್ ಚಾಲನೆ ಕೊಟ್ಟಿದ್ದು, ಇಂದು ತೆರೆ ಬಿಳಲಿದೆ. ಅದರಂತೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಮಹಾನಾಯಕರ ವಿಡಿಯೋವನ್ನು ಹಾಕಿ ಎಂದು ಬಹಿರಂಗ ವೇದಿಕೆಯಲ್ಲಿ ವಿಡಿಯೋ ರಿಲೀಸ್ ಮಾಡಿದ್ದಾರೆ.
ಮೈಸೂರು, ಆ.10: ಮುಡಾ ಹಗರಣ ಖಂಡಿಸಿ ಮೈಸೂರು ಚಲೋ ಕಾರ್ಯಕ್ರಮಕ್ಕೆ ಎರಡು ಪಕ್ಷಗಳಾದ ಬಿಜೆಪಿ-ಜೆಡಿಎಸ್ ಚಾಲನೆ ಕೊಟ್ಟಿದ್ದು, ಇಂದು ತೆರೆ ಬಿಳಲಿದೆ. ಅದರಂತೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(H. D. Kumaraswamy), ‘ನಾವು ಮೈಸೂರು ಚಲೋಗೆ ಚಾಲನೆ ನೀಡಿದ ಬಳಿಕ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮವನ್ನು ಬಿಡದಿಯಿಂದ ಪ್ರಾರಂಭ ಮಾಡಿತು. ಆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು, ಹಲವಾರು ಪ್ರಶ್ನೆಗಳನ್ನು ಬಿಜೆಪಿ-ಜೆಡಿಎಸ್ ಮುಂದೆ ಇಟ್ಟಿದ್ದಾರೆ. ಜೊತೆಗೆ ನನ್ನ ಮತ್ತು ಯಡಿಯೂರಪ್ಪ ಅವರ ಆಡಳಿತಾವಧಿಯ ಹೇಳಿಕೆಗಳ ವಿಡಿಯೋವನ್ನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನವರು ಪ್ರದರ್ಶಿಸಿದ್ದಾರೆ. ಅದಕ್ಕೆ ಉತ್ತರಿಸಿ, ‘ನಾನು ಮತ್ತು ಬಿಎಸ್ವೈ ಅವರ ನಡುವೆ ರಾಜಕೀಯ ಸಂಘರ್ಷ ಮಾಡಿರಬಹುದು. ಅದಕ್ಕೇಲ್ಲ ಉತ್ತರ ಕೊಡುವ ನೈತಿಕತೆಯನ್ನು ನಾವಿಬ್ಬರು ಹೊಂದಿದ್ದೇವೆ. ಅದಕ್ಕೂ ಮುಂಚೆ ಕಾಂಗ್ರೆಸ್ ಮಹಾನಾಯಕರ ವಿಡಿಯೋವನ್ನು ಹಾಕಿ ಎಂದು ಬಹಿರಂಗ ವೇದಿಕೆಯಲ್ಲಿ ಕುಮಾರಸ್ವಾಮಿ ಅವರು ವಿಡಿಯೋ ರಿಲೀಸ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ