AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮೀ ಯೋಜನೆಯ 9 ನೇ ಕಂತು ಬಿಡುಗಡೆ; ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ

ಗೃಹಲಕ್ಷ್ಮೀ ಯೋಜನೆಯ 9 ನೇ ಕಂತು ಬಿಡುಗಡೆ; ಮನೆಗೆ ವಾಷಿಂಗ್ ಮಷಿನ್ ತಂದ ಗೃಹಿಣಿ

ಕಿರಣ್ ಹನುಮಂತ್​ ಮಾದಾರ್
|

Updated on:Aug 10, 2024 | 5:38 PM

Share

ಈ ಹಿಂದೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಲತಾ ಎಂಬವವರು ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಯುಗಾದಿ ಹಬ್ಬಕ್ಕೆ ಹೊಸ ಫ್ರಿಜ್​ವೊಂದನ್ನು ಖರೀದಿ ಮಾಡಿದ್ದರು. ಇದೀಗ ಹಾನಗಲ್ ತಾಲೂಕಿನ ಬಾಳಬೀಡಂ ಗ್ರಾಮದ ನಿವಾಸಿ ಚಂಪವಾತಿ ಕರೆವ್ವನವರ್ ಎಂಬ ಮಹಿಳೆ ವಾಷಿಂಗ್ ಮಷಿನ್ ಖರೀದಿಸಿದ್ದಾರೆ.

ಹಾವೇರಿ, ಆ.10: ಮಹಿಳೆಯರು ಕಾತರದಿಂದ ಕಾಯುತ್ತಿದ್ದ ಗೃಹಲಕ್ಷ್ಮೀ ಯೋಜನೆಯ(Gruha Lakshmi Scheme) 9 ನೇ ಕಂತು ಬಿಡುಗಡೆಯಾಗಿದ್ದು, ಅದೇ ಹಣದಿಂದ ಗೃಹಿಣಿಯೊಬ್ಬರು ಮನೆಗೆ ವಾಷಿಂಗ್ ಮಷಿನ್ ಖರೀದಿಸಿದ್ದಾರೆ. ಹೌದು, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಬೀಡಂ ಗ್ರಾಮದ ನಿವಾಸಿ ಚಂಪವಾತಿ ಕರೆವ್ವನವರ್ ಎಂಬ ಮಹಿಳೆ, ಗೃಹಲಕ್ಷ್ಮೀ ಹಣದಿಂದ ವಾಷಿಂಗ್ ಮಷಿನ್ ಖರೀದಿಸಿ ಪೂಜೆ ಸಲ್ಲಿಸಿದ್ದಾರೆ. ಇದೇ ಖುಷಿಯಲ್ಲಿ ಮಾತನಾಡಿದ ಅವರು, ‘ಒತ್ತಡದಿಂದ ಕೆಲಸ ಮಾಡುತ್ತಿದ್ದೆ. ಇದೀಗ ವಾಷಿಂಗ್ ಮಷಿನ್ ಖರೀದಿಯಿಂದ ಕೆಲಸದ ಹೊರೆ ಕಡಿಮೆಯಾಗಿದೆ. ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 10, 2024 05:34 PM