ತರುಣ್​ ಸುಧೀರ್​-ಸೋನಲ್​ ಆರತಕ್ಷತೆಗೆ 180 ಬಗೆಯ ಊಟ; ಸಿದ್ಧವಾಗಿದೆ ಭರ್ಜರಿ ಭೋಜನ

ತರುಣ್​ ಸುಧೀರ್​-ಸೋನಲ್​ ಆರತಕ್ಷತೆಗೆ 180 ಬಗೆಯ ಊಟ; ಸಿದ್ಧವಾಗಿದೆ ಭರ್ಜರಿ ಭೋಜನ

Mangala RR
| Updated By: ಮದನ್​ ಕುಮಾರ್​

Updated on: Aug 10, 2024 | 8:44 PM

ಬಹಳ ಅದ್ದೂರಿಯಾಗಿ ಸೋನಲ್ ಮತ್ತು ತರುಣ್​ ಸುಧೀರ್​ ಅವರ ಆರತಕ್ಷತೆ ಸಮಾರಂಭ ನಡೆಯುತ್ತಿದೆ. 8 ಬಗೆಯ ದೋಸೆ, 22 ಬಗೆಯ ಸಿಹಿ ತಿಂಡಿ, 12 ಬಗೆಯ ಚಾಟ್ಸ್​ ಸೇರಿದಂತೆ ಒಟ್ಟು 180 ಬಗೆಯ ಆಹಾರ ಪದಾರ್ಥವನ್ನು ಬಾಣಸಿಗರು ಸಿದ್ಧಪಡಿಸಿದ್ದಾರೆ. ಎಷ್ಟೇ ಜನರು ಬಂದರೂ ಕೊರತೆ ಆಗದ ರೀತಿಯಲ್ಲಿ ಅಡುಗೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ನಿರ್ದೇಶಕ ತರುಣ್​ ಸುಧೀರ್​ ಹಾಗೂ ನಟಿ ಸೋನಲ್​ ಮಾಂಥೆರೋ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು (ಆಗಸ್ಟ್​ 10) ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಪೂರ್ಣಿಮಾ ಪ್ಯಾಲೇಸ್​ನಲ್ಲಿ ರಿಸೆಪ್ಷನ್​ ನಡೆಯುತ್ತಿದೆ. ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಸಿನಿಮಾ, ರಾಜಕೀಯ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಆಶೀರ್ವಾದ ಮಾಡುತ್ತಿದ್ದಾರೆ. ಅಥಿತಿಗಳಿಗಾಗಿ ಬರೋಬ್ಬರಿ 180 ಬಗೆಯ ಆಹಾರ ಸಿದ್ಧ ಪಡಿಸಲಾಗಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ನಾಳೆ (ಆಗಸ್ಟ್​ 11) ತರುಣ್​ ಸುಧೀರ್​ ಹಾಗೂ ಸೋನಲ್​ ಮಾಂತೆರೋ ಮದುವೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.